ವೀಕೆಂಡ್ ಕರ್ಫ್ಯೂ ನಲ್ಲೂ ಇರಲಿದೆ ಸಾರಿಗೆ ಸೇವೆ
ಬೆಂಗಳೂರು : ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ನಲ್ಲೂ ರಾಜ್ಯಾದ್ಯಂತ ಸಾರಿಗೆ ಸೇವೆ ಇರಲಿದೆ ಎಂದು ಕೆಎಸ್ ಆರ್ ಟಿಸಿ ನಿಗಮ ಪ್ರಕಟನೆ ಹೊರಡಿಸಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಮೊದಲ ವೀಕೆಂಡ್ ಕರ್ಫ್ಯೂನಲ್ಲಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ.
ಹೀಗಾಗಿ ಎರಡನೇ ವಿಕೆಂಡ್ ಕರ್ಫ್ಯೂನಲ್ಲಿ ಬಸ್ ಇರುತ್ತೋ ಇಲ್ಲವೋ ಎಂಬ ಗೊಂದಲ ಸಾರ್ವಜನಿಕರಲ್ಲಿ ಇತ್ತು. ಇದಕ್ಕೆ ಕೆಎಸ್ ಆರ್ ಟಿಸಿ ನಿಗಮ ಸ್ಪಷ್ಟನೆ ನೀಡಿದ್ದು, ಶನಿವಾರ ಮತ್ತು ಭಾನುವಾರ ಬಸ್ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಅಗತ್ಯಕ್ಕೆ ಅನುಗುಣವಾಗಿ ಕೆಎಸ್ ಆರ್ ಟಿಸಿ ನಿಗಮ ಬಸ್ ವ್ಯವಸ್ಥೆ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 500 ರಿಂದ ಒಂದು ಸಾವಿರ ಬಸ್ ಗಳು ಸಂಚಾರ ಆರಂಭಿಸಿವೆ.
ವೀಕೆಂಡ್ ಕರ್ಫ್ಯೂ ಬಳಿಕ ಎರಡು ಸಾವಿರ ಬಸ್ ಗಳು ರಸ್ತೆಗಿಳಿಯಲಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾದರೆ ಬಸ್ ಗಳ ಸಂಖ್ಯೆ ಹೆಚ್ಚಿಸಲಾಗುತ್ತೆ ಎಂದು ಕೆಎಸ್ ಆರ್ ಟಿಸಿ ನಿಗಮ ತಿಳಿಸಿದೆ.