ದ್ವಿಪಥ ರಸ್ತೆಗಾಗಿ ಮರಗಳ ಮಾರಣಹೋಮ haveri saaksha tv
ಹಾವೇರಿ : ಜಿಲ್ಲೆಯಿಂದ ಗುತ್ತಲ ಸಂಪರ್ಕಿಸುವ ರಸ್ತೆಯನ್ನು ದ್ವಿಪಥವಾಗಿ ಮಾಡಲು ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲಾಗುತ್ತಿದೆ.
ರಸ್ತೆಗಾಗಿ ಶಿವಲಿಂಗ ನಗರದಿಂದ ಹುಕ್ಕೇರಿ ಮಠದವರೆಗೆ 25 ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದ್ದು, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸುಮಾರು 40 ವರ್ಷಗಳಿಂದ ಬೆಳೆದಿದ್ದ ಹುಣಸೆ, ಅಕೇಶಿಯಾ ಸೇರಿದಂತೆ ವಿವಿಧ ಜಾತಿಯ ಮರಗಳನ್ನ ಕತ್ತರಿಸಲಾಗಿದೆ.
ಈ ಮರಗಳ ಕೆಳಗೆ ಸಾಕಷ್ಟು ಮಂದಿ ತಲ್ಲುವ ಗಾಡಿಯಲ್ಲಿ ವಾಪ್ಯಾರ ಮಾಡುತ್ತಿದ್ದರು. ಇದೀಗ ಮರಗಳನ್ನು ಕಡಿದಿರುವುದರಿಂದ ವ್ಯಾಪಾರಸ್ತರ ಬದುಕು ಕೂಡ ಕಂಗಾಲಾಗಿದೆ.
ಇನ್ನು ರಸ್ತೆಗಾಗಿ 40 ವರ್ಷಗಳಿಂದ ಬೆಳೆದಿದ್ದ ಮರಗಳನ್ನು ಕಡಿದಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.









