ADVERTISEMENT
Thursday, September 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬರುವುದು ಸ್ವಲ್ಪ ತಡವಾಗಬಹುದು ಆದರೆ ಬರುವುದಂತೂ ಪಕ್ಕಾ ಟ್ರಬಲ್ ಶೂಟರ್ ಡಿಕೆಶಿ…

admin by admin
March 17, 2020
in Newsbeat, Politics, Samagra karnataka
DKSHI
Share on FacebookShare on TwitterShare on WhatsappShare on Telegram

ಪ್ರತಿ ಕ್ಷೆತ್ರಕ್ಕೆ ಹೋಗಿ, ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಡಿಕೆ ಶಿವಕುಮಾರ ಇಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು . ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನೆ ಬಳಿಯೇ ಆಗಲಿ ಅಥವಾ ಬೇರೆ ಕಡೆಗಳಲ್ಲಿ ಆಗಲಿ ಸಾವಿರಾರು ಜನರು ಸೇರುವುದು ಸೂಕ್ತ ಅಲ್ಲ. ಎರಡು ದಿನ ತಡವಾಗಬಹುದು. ಆದರೆ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ. ನಾವು ಗೆದ್ದಿರುವ ಕ್ಷೇತ್ರ ಹಾಗೂ ಸೋತಿರುವ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆದು ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಆದ್ದರಿಂದ ಯಾರೂ ಆತಂಕ ಪಡುವುದು ಬೇಡ, ನೂಕು ನುಗ್ಗಲು ಬೇಡ. ಎಲ್ಲರಿಗೂ ಅವಕಾಶ ಸಿಗುತ್ತದೆ. ನಿಮ್ಮ ಅಭಿಪ್ರಾಯದಂತೆ ನಾನು ನಡೆಯುತ್ತೇನೆ.

ಇವತ್ತು ನನ್ನ ಸ್ನೇಹಿತರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ರಾಮಲಿಂಗಾ ರೆಡ್ಡಿ ಕಾರ್ಪೊರೇಟರ್ ಆಗಿದ್ದರು. ಅದಕ್ಕಿಂತ ಮುಂಚಿತವಾಗಿ ನಾವಿಬ್ಬರು ಯೂತ್ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆವು. ನಾವು 80ರ ದಶಕದಲ್ಲೇ ಜತೆಯಾಗಿ ಕೆಲಸ ಮಾಡಿದ್ದೆವು. ಏಳು ಬಾರಿ ಜತೆಯಾಗಿ ವಿಧಾನಸೌಧವನ್ನು ಪ್ರವೇಶಿಸಿದ್ದೇವೆ. ಅವರು ನನಗಿಂತ ಹಿರಿಯರಾಗಿದ್ದು ಇಲ್ಲಿಯವರೆಗೂ ಅಕ್ಕಪಕ್ಕದಲ್ಲೇ ಕೂತಿದ್ದೇವೆ. ಮುಂದೆಯೂ ನಾವು ಅದೇ ರೀತಿ ಇರುತ್ತೇವೆ. ಬೆಂಗಳೂರು ನಗರಕ್ಕೆ ಇವರ ತ್ಯಾಗ, ಸೇವೆ, ಅನುಭವ ಅಗತ್ಯವಿದೆ. ಇವರು ಬೆಂಗಳೂರು ನಗರದ ಜವಾಬ್ದಾರಿ ಹಾಗೂ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಹಿರಿಯರಾಗಿರುವ ಅವರಿಂದ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ಇದುವರೆಗೂ ನನಗೆ ಉತ್ತಮ ಸಹಕಾರ ನೀಡಿದ್ದು, ಮುಂದೆಯೂ ಕೊಡುತ್ತಾರೆ. ಕಾರ್ಯಕರ್ತರ ಈ ಪ್ರೀತಿ ಅಭಿಮಾನ ಯಾವಾಗಲೂ ನಮ್ಮ ಜತೆ ಇರುತ್ತದೆ. ನಾವು ಅವರಿಗೆ ಅದೇ ರೀತಿ ಸ್ಪಂದಿಸಬೇಕಿದೆ.

 

Related posts

ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್

ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್

September 10, 2026
ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

September 10, 2026
Advt
ಜಾಹಿರಾತು

ಬೆಂಗಳೂರಿನ ಕಡೆ ಇಡೀ ವಿಶ್ವ ನೋಡುತ್ತಿದೆ. ಈ ರಾಜ್ಯ ಈ ನಗರದ ಮೇಲೆ ಅವಲಂಭಿಸಿದೆ. ಇದಕ್ಕೆ ನಮ್ಮ ಪಕ್ಷ ಕೂಡ ಅದರದೇ ಆದ ಕಾರ್ಯಕ್ರಮ ರೂಪಿಸಲಿದೆ. ಇಲ್ಲಿರುವ ಜನರನ್ನು ಕಡಿಮೆ ಮಾಡುವ ಆಸೆ ಇದೆ. ಹೊರಗಿನವರ ವಲಸೆ ಕಡಿಮೆ ಮಾಡುವುದು ನಮ್ಮ ಮೂಲ ಸಿದ್ಧಾಂತವಾಗಿದೆ. ಮನಮೋಹನ್ ಸಿಂಗ್ ಅವರು ಈ ಹಿಂದೆನಗರಗಳ ಕಡೆ ವಲಸೆ ಬರುವುದು ಬೇಡ ಅಂತಾ ಹಳ್ಳಿಗಳಲ್ಲೇ ಕಾರ್ಯಕ್ರಮ ರೂಪಿಸಿದ್ದರು. ಇವುಗಳನ್ನು ಮನದಲ್ಲಿಟ್ಟುಕೊಂಡು ನಾವು ನಮ್ಮ ಕಾರ್ಯಕ್ರಮ ರೂಪಿಸುತ್ತೇವೆ. ಈ ಸಂದರ್ಭದಲ್ಲಿ ನಾನು ಹೇಳುವುದೆಂದರೆ, ಬೆಂಗಳೂರಿನ 28 ಕ್ಷೇತ್ರಕ್ಕೂ ನಾನು ಬರುತ್ತೇನೆ. ಒಂದೆರಡು ದಿನ ತಡವಾಗಬಹುದು. ಕೊರೋನಾ ವೈರಸ್ ನಿಂದ ಸಮಸ್ಯೆ ಇದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಎಲ್ಲರಲ್ಲಿ ಜಾಗೃತಿ ಮೂಡಿಸೋಣ. ಕಾರ್ಯಕರ್ತರು ಸ್ವಲ್ಪ ತಾಳ್ಮೆಯಿಂದ ಇರಬೇಕು ಅಂತಾ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ.

ಬೆಂಗಳೂರಿಗೆ ಸಂಬಂಧಿಸಿದ ವಿಚಾರದಲ್ಲಿ ಇಲ್ಲಿಗೆ ಸಂಬಂಧಪಟ್ಟ ಶಾಸಕರುಗಳಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಕೂತು ಚರ್ಚೆ ಮಾಡುತ್ತಾರೆ. ಅವರ ಜತೆಗೆ ದಿನೇಶ್, ಜಾರ್ಜ್, ಕೃಷ್ಣಪ್ಪನವರು, ಜಮೀರ್, ಹ್ಯಾರೀಸ್ ಅವರ ಜತೆಗೆ ಹೊಸ ಶಾಸಕರುಗಳಿದ್ದಾರೆ. ಕೆಲವರು ಸೋತಿರುವ ಹಿರಿಯ ನಾಯಕರಿದ್ದಾರೆ. ಎಲ್ಲರೂ ಕೂತು ಚರ್ಚಿಸಿ ನಾವು ಯಾವ ರೀತಿ ಹೋರಾಟ ಮಾಡಬೇಕು. ಪಕ್ಷ ಕಾರ್ಪೋರೇಷನ್ ಮಟ್ಟದಲ್ಲಿ ಹೋರಾಡಬೇಕೆ, ಸರ್ಕಾರದ ಮಟ್ಟದಲ್ಲಿ ಹೋರಾಡಬೇಕೆ ಅಥವಾ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾ ಅಂತಾ ಚರ್ಚಿಸುತ್ತಾರೆ.

ಕೇಂದ್ರ ಸರ್ಕಾರ ಉಪಕಾರ ಮಾಡುವುದು ಬೇಡ, ಕಿರುಕುಳ ಕೊಡದಿದ್ದರೆ ಸಾಕು:

ಕೇಂದ್ರ ಸರ್ಕಾರ ಆಧಾರ್, ಎನ್ ಸಿಆರ್ ಸೇರಿದಂತೆ ಅನೇಕ ವಿಚಾರವಾಗಿ ಸಾಮಾನ್ಯ ಜನರ ವೈಯಕ್ತಿಕ ನಡೆಗಳ ಮೇಲೆ ನಿಗಾ ಇಡುತ್ತಿದೆ. ದೇಶದ ಜನರನ್ನು ಅವರಪಾಡಿಗೆ ಅವರು ಬದುಕಲು ಬಿಡಬೇಕು. ಅವರ ಮೇಲೆ ಕಣ್ಣಿಡಲು ಅವರೇನು ಭಯೋತ್ಪಾದಕರಾ? ಜನರ ವೈಯಕ್ತಿಕ ಬದುಕಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಜನರನ್ನು ನೀವು ನಡೆಸಿಕೊಳ್ಳುತ್ತಿರುವ ರೀತಿ ಸರಿಇಲ್ಲ. ಅವರಿಗೆ ನೀವು ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಬೇಡಿ. ಅವರು ಬದುಕಿದರೆ ದೇಶ ನೆಮ್ಮದಿಯಾಗಿ ಬದುಕುತ್ತದೆ. ಅವರು ಆರ್ಥಿಕವಾಗಿ ಬಲವಾದರೆ ದೇಶ ಬಲವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಬಗ್ಗೆ ನಾನು ವಿವರವಾಗಿ ಮಾಹಿತಿ ಪಡೆದು ನಂತರ ಮುಂದಿನ ಪ್ರತಿಕ್ರಿಯೆ ನೀಡುತ್ತೇನೆ

Tags: CongressDK Shivakumar
ShareTweetSendShare
Join us on:

Related Posts

ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್

ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್

by Shwetha
September 10, 2026
0

ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ನೀಡಿದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಈಗ...

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

by Shwetha
September 10, 2026
0

ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಹಲವು ಯೋಜನೆಗಳ ಪರಿಷ್ಕರಣೆ ನಡೆಸಿದ್ದು, ಇದೀಗ ಪಡಿತರ ಚೀಟಿಗಳ ಪರಿಷ್ಕರಣೆ ಪ್ರಕ್ರಿಯೆಯೂ ಚರ್ಚೆಗೆ ಬಂದಿದೆ. ಇದರ ಭಾಗವಾಗಿ ರೇಷನ್...

ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿ: ಆಸ್ತಿ ವಿವಾದದಲ್ಲಿ ಮಗನಿಗೆ ಸುಪ್ರೀಂ ಕೋರ್ಟ್ ಬುದ್ಧಿಮಾತು

ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿ: ಆಸ್ತಿ ವಿವಾದದಲ್ಲಿ ಮಗನಿಗೆ ಸುಪ್ರೀಂ ಕೋರ್ಟ್ ಬುದ್ಧಿಮಾತು

by Shwetha
September 10, 2026
0

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೆತ್ತ ತಂದೆ-ತಾಯಿಯನ್ನೇ ನ್ಯಾಯಾಲಯಕ್ಕೆ ಎಳೆದು ತಂದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಬುದ್ಧಿಮಾತು ಹೇಳಿದೆ. ಕಾನೂನು ಹಕ್ಕುಗಳ ಜೊತೆಗೆ ಮಾನವೀಯ ಸಂಬಂಧಗಳಿಗೂ ಮಹತ್ವವಿದೆ...

ತನಿಖಾ ಸಂಸ್ಥೆಗಳು ಮೋದಿ ಸರ್ಕಾರದ ಕೈಗೊಂಬೆಗಳು,ಇಡಿ ಅಂದ್ರೆ ಎಲೆಕ್ಷನ್ ಡಿಪಾರ್ಟ್‌ಮೆಂಟ್: 193 ಕೇಸ್ ಕೇವಲ 2 ಶಿಕ್ಷೆ ಎಂದು ಅಂಕಿ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ತನಿಖಾ ಸಂಸ್ಥೆಗಳು ಮೋದಿ ಸರ್ಕಾರದ ಕೈಗೊಂಬೆಗಳು,ಇಡಿ ಅಂದ್ರೆ ಎಲೆಕ್ಷನ್ ಡಿಪಾರ್ಟ್‌ಮೆಂಟ್: 193 ಕೇಸ್ ಕೇವಲ 2 ಶಿಕ್ಷೆ ಎಂದು ಅಂಕಿ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

by Shwetha
September 10, 2026
0

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ...

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

by Shwetha
September 10, 2026
0

ಬೆಂಗಳೂರು: ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾದ ಭಾರತ್ ಜೋಡೋ ಯಾತ್ರೆಯ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಕೆಪಿಸಿಸಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರು ಕೇಂದ್ರದ ಬಿಜೆಪಿ ಸರ್ಕಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram