ವಾಷಿಂಗ್ಟನ್: ಮಹಾಮಾರಿ ಕೊರೊನಾ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಉದ್ಯೋಗಕ್ಕೆ ಸಂಚಕಾರ ತಂದಿದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್1ಬಿ ವೀಸಾ ರದ್ದು ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಅಮೆರಿಕದಲ್ಲಿ ನೆಲಸಿದ್ದ ಲಕ್ಷಾಂತರ ಭಾರತ ಮೂಲದ ಐಟಿ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ.
ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿರುವ ಅಮೆರಿಕನ್ ಪ್ರಜೆಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಹೀಗಾಗಿ ಹೆಚ್1ಬಿ ವೀಸಾ ರದ್ದು ಮಾಡುವುದಾಗಿ ಎರಡು ದಿನಗಳ ಹಿಂದಷ್ಟೇ ಟ್ರಂಪ್ ಹೇಳಿದ್ದರು. ಟ್ರಂಪ್ ಹೇಳಿಕೆ ಹೊರಬಿದ್ದ ಎರಡೇ ದಿನಗಳಲ್ಲಿ ಶ್ವೇತಭವನ ಅಧಿಕಾರಿಗಳು ಹೆಚ್1ಬಿ ವೀಸಾ ರದ್ದು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಹೆಚ್1ಬಿ ವೀಸಾ ಸುಧಾರಣೆಗೆ ಟ್ರಂಪ್ ಸೂಚನೆ
ಅಮೆರಿಕದಲ್ಲಿ ಹಲವು ವರ್ಷಗಳಿಂದ ನೀಡುತ್ತಿರುವ ಹೆಚ್1ಬಿ ವೀಸಾ ರದ್ದು ಗುಮ್ಮ ಇದೀಗ ಸ್ಪಷ್ಟವಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ವಿಚಾರ ಮುಂದಿಟ್ಟುಕೊAಡು ಅಧಿಕಾರಕ್ಕೆ ಬಂದ ಟ್ರಂಪ್ ಮೇಲೆ ಭಾರತ ಸೇರಿದಂತೆ ಹಲವು ದೇಶಗಳು ಒತ್ತಡ ಹೇರಿದ್ದರಿಂದ ವೀವಾ ವಿವಾವದನ್ನು ಮುಂದಕ್ಕೆ ಹಾಕಲಾಗಿತ್ತು.
ಆದರೆ, ಈ ಬಾರಿ ಮಹಾಮಾರಿ ಕೊರೊನಾಗೆ ಇಡೀ ಅಮೆರಿಕ ತತ್ತರಿಸಿ ಹೋಗಿದೆ. 23 ಲಕ್ಷಕ್ಕೂ ಅಧಿಕ ಅಮೆರಿಕನ್ನರು ಕೊರೊನಾದಿಂದ ಬಳಲುತ್ತಿದ್ದಾರೆ. ಈಗಾಗಲೇ 1.22 ಅಮೆರಿಕನ್ನರನ್ನು ಕೊರೊನಾ ಬಲಿ ಪಡೆದಿದೆ. ಹೀಗಾಗಿ ಕೊರೊನಾ ತಡೆಗೆ ಮಾಡಿದ ಲಾಕ್‌ಡೌನ್‌ನಿಂದಾಗಿ ಅಮೆರಿಕ ಸಾವಿರಾರು ಕಂಪನಿಗಳ ಬಾಗಿಲು ಮುಚ್ಚಿದ್ದು, ನಿರುದ್ಯೋಗ ತಾಂಡವವಾಡುತ್ತಿದೆ.
ಹೀಗಾಗಿ ಅಮೆರಿಕನ್ನರಿಗೆ ಉದ್ಯೋಗ ಕಲ್ಪಿಸಲು ಹೆಚ್1ಬಿ ವೀಸಾ ಪ್ರಕ್ರಿಯೆಯಲ್ಲಿ ಸುಧಾರಣೆ ಮಾಡುವಂತೆ ಟ್ರಂಪ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ವೇತ ಭವನ ಅಧಿಕಾರಿಗಳು ವೀಸಾ ರದ್ದು ಕಾರ್ಯ ಆರಂಭಿಸಿದ್ದಾರೆ.
ಮೆರಿಟ್ ಆಧರಿತ ವೀಸಾ ಕೊಡಿ
ಇಲ್ಲಿಯವರೆಗೆ ಯಾರಿಗೆ ಬೇಕಾದರೂ ಸಿಗುತ್ತಿದ್ದ ಹೆಚ್1ಬಿ ವೀಸಾ ಪಡೆಯುವುದು ಇನ್ನು ಮುಂದೆ ಕಠಿಣವಾಗಲಿದೆ. ಅತಿಹೆಚ್ಚು ಕೌಶಲ್ಯ ಹೊಂದಿರುವವರು ಹಾಗೂ ಹೆಚ್ಚು ವೇತನ ಪಡೆಯುವವರಿಗೆ ಹೆಚ್1ಬಿ ವೀಸಾ ರದ್ದು ಮಾಡದಂತೆ ಟ್ರಂಪ್ ಸೂಚಿಸಿದ್ದಾರೆ. ಹೆಚ್1ಬಿ ನಂತರದ ಹೆಚ್2ಬಿ ಸೇರಿದಂತೆ ಉಳಿದವುಗಳನ್ನು 2020ರ ಡಿಸೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡಲು ಆದೇಶ ನೀಡಿದ್ದಾರೆ.
ಉದ್ಯೋಗಿಗಳಲ್ಲಿ ಕೌಶಲ್ಯ ಹೆಚ್ಚಿಸುವುದು ಹಾಗೂ ಅಮೆರಿಕನ್ನರಿಗೆ ಉದ್ಯೋಗ ನೀಡುವ ಸಲುವಾಗಿ ವೀಸಾ ಪ್ರಕ್ರಿಯೆಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಕೆಲಸ ಹುಡುಕಿಕೊಂಡು ಅಮೆರಿಕಕ್ಕೆ ಬಂದಿರುವ ಪ್ರತಿಭಾವಂತರಿಗೆ ಈ ಬದಲಾವಣೆಯಿಂದ ತೊಂದರೆ ಆಗುವುದಿಲ್ಲ ಎಂದು ಶ್ವೇತಭವನದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.