ಅಮೆರಿಕಾ : ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೆಚ್ 1ಬಿ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಅನೇಕರು ಸೋಶಿಯಲ್ ಮೀಡಿಯಾಗಳ ಮೂಲಕ ಟ್ರಂಪ್ ವಿರುದ್ಧ ತಿರುಗಿಬಿದಿದ್ದಾರೆ.
ಅಲ್ಲದೆ ಕೆಲ ನೆಟ್ಟಿಗರು ಹೆಚ್1 ಬಿ ವೀಸಾ ಇರದಿದ್ದರೇ ನಿಮಗೆ ನಿಮ್ಮ ಪತ್ನಿಯ ಪರಿಚಯವೇ ಆಗುತ್ತಿರಲಿಲ್ಲ ಎಂದು ಟ್ರಂಪ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಹೌದು..! ಮೂಲತಃ ಅಮೆರಿಕಾದವರಲ್ಲದ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಅವರೂ ಸಹ ಇದೇ ಎಚ್1ಬಿ ವೀಸಾದಲ್ಲಿ ಅಮೆರಿಕಾಕ್ಕೆ ಆಗಮಿಸಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಗೆ ನೆಟ್ಟಿಗರು ನೆನಪಿಸಿದ್ದಾರೆ.
ಮೆಲನಿಯಾ ಟ್ರಂಪ್ ಅವರು ಮೂಲತಃ ಸ್ಲೊವೆಲಿಯನ್ ದವರು. 96ರಲ್ಲಿ ಪ್ರವಾಸಿ ವೀಸಾದ ಮೇಲೆ ಅಮೆರಿಕಾಕ್ಕೆ ಆಗಮಿಸಿದ್ದರು. 2001ರಲ್ಲಿ ಇಬಿ1 ವೀಸಾ ಪಡೆಯುವಲ್ಲಿ ಸಫಲರಾಗಿ, 2006ರಲ್ಲಿ ಅಮೆರಿಕದ ಪೌರತ್ವ ಪಡೆದರು. ಇದೀಗ ಆಕೆಯ ಪೋಷಕರಿಗೆ ಪೌರತ್ವ ಕೊಡಿಸಲು ಸಿದ್ಧತೆ ನಡೆಸಿದ್ದಾರೆ
ಈ ಎಲ್ಲವನ್ನು ಸೋಶಿಯಲ್ ಮೀಡಿಯಾ ಮೂಲಕ ಟ್ರಂಪ್ ಅವರಿಗೆ ನೆನಪಿಸುತ್ತಿರುವ ನೆಟ್ಟಿಗರು, ಒಂದು ವೇಳೆ ಎಚ್1ಬಿ ವೀಸಾ ಇರದಿದ್ದರೆ ನಿಮಗೆ ನಿಮ್ಮ ಪತ್ನಿಯ ಪರಿಚಯವೇ ಆಗುತ್ತಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇನ್ನು ಕೆಲವರು ಹೆಚ್1ಬಿ ವೀಸಾದ ಮೇಲೆ ಆಗಮಿಸಿದ ಮೆಲನಿಯಾ ಟ್ರಂಪ್ ಹಾಗೂ ಆಕೆಯ ಪೋಷಕರನ್ನು ವಾಪಸ್ ತಮ್ಮ ದೇಶಕ್ಕೆ ಕಳುಹಿಸುವಿರೇ ಎಂದು ಪ್ರಶ್ನಿಸುತ್ತಿದ್ದಾರೆ.