ವಾಷಿಂಗ್ಟನ್: ಭಾರತ-ಪಾಕಿಸ್ತಾನ ಯುದ್ಧವೂ ಸೇರಿದಂತೆ ವಿಶ್ವದ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಹೇಳಿಕೆ ನೀಡಿದ್ದರೂ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸುವುದು ಅನುಮಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಶಸ್ತಿಗಾಗಿ ಟ್ರಂಪ್ ಅವರೇ ಕೊಚ್ಚಿಕೊಳ್ಳುತ್ತಿದ್ದರೂ, ಶಾಂತಿ ಸ್ಥಾಪನೆಗಾಗಿ ಅವರ ಪ್ರಯತ್ನಗಳು ಶೂನ್ಯ ಎಂದು ತಜ್ಞರು ತೀರ್ಮಾನಿಸಿದ್ದಾರೆ.
ನೊಬೆಲ್ ಪ್ರಶಸ್ತಿಯನ್ನು ಸಾಮಾನ್ಯವಾಗಿ ಸ್ವತಂತ್ರ ವ್ಯಕ್ತಿಗಳು ಅಸಾಧಾರಣ ಸಾಧನೆ ಮಾಡಿದಾಗ, ಜನೋಪಕಾರಿ ಸೇವೆ ಸಲ್ಲಿಸಿದಾಗ, ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದಾಗ ನೀಡಲಾಗುತ್ತದೆ. ಆದರೆ, ಡೊನಾಲ್ಡ್ ಟ್ರಂಪ್ ಅವರ ಕಾರ್ಯವೈಖರಿ ಇದಕ್ಕೆ ತದ್ವಿರುದ್ಧವಾಗಿದೆ ಎನ್ನಲಾಗಿದೆ.
* ಇಸ್ರೇಲ್-ಗಾಜಾ ವಿವಾದ: ಇಸ್ರೇಲ್-ಗಾಜಾ ಯುದ್ಧದ ಸಂದರ್ಭದಲ್ಲಿ ಟ್ರಂಪ್ ಅವರು ಇಸ್ರೇಲ್‌ಗೆ ಬೆಂಬಲ ನೀಡಿದ್ದಲ್ಲದೆ, ರಷ್ಯಾದ ಸ್ನೇಹವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು.
* ವ್ಯಾಪಾರ ಯುದ್ಧ: ಹಳೆಯ ಮಿತ್ರ ದೇಶಗಳಾದ ಭಾರತ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹಿಂಪಡೆಯುವ ಮೂಲಕ ‘ವ್ಯಾಪಾರ ಯುದ್ಧ’ವನ್ನು ಆರಂಭಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಟ್ರಂಪ್ ಅವರು ಶಾಂತಿ ಸ್ಥಾಪನೆಯ ಯಾವುದೇ ಮಹತ್ವದ ಕೆಲಸವನ್ನು ಮಾಡಿಲ್ಲ. ಹೀಗಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸುವುದು ಬಹಳ ಕಷ್ಟ ಎಂದು ಅಂತರರಾಷ್ಟ್ರೀಯ ಸಂಬಂಧಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.








