ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಗೃಹಿಣಿಯರು ಈ ಮಾಸದಲ್ಲಿ ಒಂದಲ್ಲ ಒಂದು ವ್ರತ ಪೂಜೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ನೀವು ಭಗವಾನ್ ಶಿವನ ಭಕ್ತರಾಗಿದ್ದು ಬೋಲಾ ಶಂಕರನಿಗೆ ಯಾವ ಪ್ರಸಾದ ಬಡಿಸಬೇಕು ಎನ್ನವ ಆಲೋಚನೆಯಲ್ಲಿದ್ದರೆ ಈ ರಸಿಪಿ ನೋಡಿ. ಮಾವಿನಹಣ್ಣು ಹಾಗು ಸಬ್ಬಕ್ಕಿಂದ ಮಾಡಬಹುದಾದ ಈ ಪಾಯಸದ(ಖೀರ್) ರೆಸಿಪಿ ನಿಮಗೂ, ಶಿವನಿಗೂ ಇಬ್ಬರಿಗೂ ಇಷ್ಟವಾಗುತ್ತದೆ.
ಈ ಟೇಸ್ಟಿ ಖೀರ್ ಮಾಡುವ ವಿಧಾನ ರೀತಿ ಇದೆ.
ಮಾವಿನ ಸಬ್ಬಕ್ಕಿ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು-
1 ಲೀಟರ್ ಪೂರ್ಣ ಕೆನೆ ಹಾಲು
– ½ ಕಪ್ ಸಕ್ಕರೆ
-125 ಗ್ರಾಂ ಸಬ್ಬಕ್ಕಿ (1 ಗಂಟೆ ನೆನೆಸಿದ)
-1 ಕಪ್ ಮಾವಿನ ಹಣ್ಣಿನ ತಿರುಳು
– ½ ಕಪ್ ತಾಜಾ ತೆಂಗಿನ ಪುಡಿ
– ½ ಟೀಸ್ಪೂನ್ ಹಸಿರು ಏಲಕ್ಕಿ ಪುಡಿ
-1 ಮಾವಿನ ಹಣ್ಣಿನ ತುಂಡುಗಳು
– 4-5 ಪಿಸ್ತಾ ಸಣ್ಣದಾಗಿ ಹಚ್ಚಿಕೊಂಡಿರಿ
– 4-5 ಬಾದಾಮಿ ಸಣ್ಣದಾಗಿ ಹಚ್ಚಿಕೊಂಡಿರಿ
ಮಾವು ಸಬ್ಬಕ್ಕಿ ಖೀರ್ ಮಾಡುವ ವಿಧಾನ-
ಮಾವು ಸಬ್ಬಕ್ಕಿ ಪಾಯಸ ಮಾಡಲು, ಮೊದಲು ಹಾಲನ್ನು ಕುದಿಸಿಕೊಳ್ಳಿ, ಹಾಲು ಕುದಿಯುವ ಸಮಯದಲ್ಲಿ ಅದಕ್ಕೆ ನೆನೆಸಿದ ಸಬ್ಬಕ್ಕಿಯನ್ನ ಸೇರಿಸಿ ನಿರಂತರವಾಗಿ ತಿರುಗಿಸುತ್ತಾ ಬನ್ನಿ. ಸತತ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. 10 ನಿಮಿಷಗಳ ನಂತರ ಸಬ್ಬಕ್ಕಿ ಪಾರದರ್ಶಕವಾಗಿ ಕಾಣಿಸಲು ಶರುವಾಗುತ್ತೆ. ಸಬ್ಬಕ್ಕಿ ಬೆಂದಿದೆ ಎನಿಸಿದ ನಂತರ ಸಕ್ಕರೆ ಮತ್ತು ತೆಂಗಿನ ಪುಡಿಯನ್ನ ಪಾಯಸಕ್ಕೆ ಸೇರಿಸಿ 5 ನಿಮಿಷ ಬೇಯಿಸಿ.
ಈಗ ಪಾಯಸಕ್ಕೆ ಏಲಕ್ಕಿ ಪುಡಿ ಮತ್ತು ಮಾವಿನ ತಿರುಳನ್ನ ಹಾಕಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ 6-8 ನಿಮಿಷಗಳ ಕಾಲ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ. ಖೀರ್ ದಪ್ಪಗಾದ ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಮಾವಿನಕಾಯಿ ಹಣ್ಣಿನ ತುಂಡು, ಸ್ವಲ್ಪ ಪಿಸ್ತಾ ಮತ್ತು ಬಾದಾಮಿ ಸೇರಿಸಿ ಮಿಶ್ರಣ ಮಾಡಿ ಫ್ರಿಜ್ನಲ್ಲಿ ತಣ್ಣಗಾಗಲು ಬಿಡಿ. ಇದೀಗ ನಿಮ್ಮ ಟೇಸ್ಟಿ ಮಾವಿನ ಸಬ್ಬಕ್ಕಿ ಪಾಯಸ ತಿನ್ನಲು ರೆಡಿಯಾಗಿದೆ. ಇದನ್ನ ಪೂಜೆಗೂ ಬಳಿಸಿ ನೀವು ಸವಿಯಲೂ ಸಿದ್ದರಾಗಿ..








