ಮಾವಿನ ಹಣ್ಣಿನ ಹಲ್ವಾ
ಬೇಕಾಗುವ ಸಾಮಗ್ರಿಗಳು:
1. 1 ಕಪ್ ಮಾವಿನ ಹಣ್ಣಿನ ತಿರುಳು
2. 3/4 ಕಪ್ ಸಕ್ಕರೆ
3. 2 ಚಮಚ ಕಾರ್ನ್ ಫ್ಲವರ್
4. 1/2 ಕಪ್ ತುಪ್ಪ
5. ಅಲಂಕಾರಕ್ಕೆ ಪಿಸ್ತಾ, ಕೇಸರಿ
ಮಾಡುವ ವಿಧಾನ:
ಮೊದಲಿಗೆ, ಮಾವಿನ ಹಣ್ಣಿನ ತಿರುಳನ್ನು ಮಿಕ್ಸಿಯಲ್ಲಿ ನಯವಾಗಿ ರುಬ್ಬಿ ಅಥವಾ ಫೋರ್ಕ್‌ನಿಂದ ಪೇಸ್ಟ್ ಮಾಡಿಕೊಳ್ಳಿ.
ಕಾರ್ನ್ ಫ್ಲವರ್ ಅನ್ನು 1/4 ಕಪ್ ನೀರಿನಲ್ಲಿ ಬೆರೆಸಿ lump-free ಪೇಸ್ಟ್ ತಯಾರಿಸಿ.
ಒಂದು ಕಾವಲಿಯನ್ನು medium flameನಲ್ಲಿ ಇಟ್ಟು, ಅದಕ್ಕೆ 2-3 ಚಮಚ ತುಪ್ಪ ಹಾಕಿ ಬಿಸಿ ಮಾಡಿ.
ಬಿಸಿ ಕಾವಲಿಗೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ. 2-3 ನಿಮಿಷಗಳ ಕಾಲ ಹದವಾಗಿ ಕುದಿಯಿಸಿ, ಅದಕ್ಕೆ ಸಕ್ಕರೆ ಸೇರಿಸಿ.
ಸಕ್ಕರೆಯು ಹಣ್ಣಿನ ಪೇಸ್ಟ್‌ನಲ್ಲಿ ಸಂಪೂರ್ಣವಾಗಿ ಕರಗಿ, ಮಿಶ್ರಣ ಕುದಿಯಲು ಶುರುವಾಗುತ್ತದೆ.
ಈಗ ತಯಾರಿಸಿದ ಕಾರ್ನ್ ಫ್ಲವರ್ ಪೇಸ್ಟ್ ಅನ್ನು ನಿಧಾನವಾಗಿ ಮಿಶ್ರಣಕ್ಕೆ ಸೇರಿಸಿ.
ಸತತವಾಗಿ ತಿರುಗಿಸುತ್ತಿರಿ, ಮಿಶ್ರಣದ ಹದ ದಪ್ಪಗಾಗುವ ಹಂತಕ್ಕೆ ಬರಲು 5-7 ನಿಮಿಷ ಬೇಕಾಗುತ್ತದೆ.
ಮಿಶ್ರಣ ಹದಕ್ಕೆ ಬರುತ್ತಿದ್ದಂತೆ ತುಪ್ಪವನ್ನು ಹಂತ ಹಂತವಾಗಿ ಸೇರಿಸಿ. ಚೆನ್ನಾಗಿ ತಿರುಗಿಸಿ, ಮಿಶ್ರಣವು ಕಾವಲಿಯ ಅಂಚಿನಿಂದ ಸುಲಭವಾಗಿ ಬೇರ್ಪಡುವಂತೆ ಆಗುತ್ತದೆ.
ಮಿಶ್ರಣವು ಚೆನ್ನಾಗಿ ಬೆಂದ ನಂತರ, ಅದನ್ನು ತುಪ್ಪ ಹಚ್ಚಿದ ಪ್ಲೇಟ್ ಅಥವಾ ಪಾತ್ರೆಗೆ ಹಾಕಿ ಸಮತಟ್ಟಾಗಿ ಹರಡಿ.
ಈಗ ಪಿಸ್ತಾ ತುಂಡುಗಳು ಮತ್ತು ಕೇಸರಿಯಿಂದ ಅಲಂಕರಿಸಿ .
ತಣ್ಣಗಾದ ಮೇಲೆ, ಹಲ್ವಾವನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.
ಟಿಪ್ಸ್:
ತುಪ್ಪದ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಿದರೆ ಹಲ್ವಾ ಹೆಚ್ಚು ಮೃದುವಾಗುತ್ತದೆ.
ತಾಜಾ ಮಾವು ಅಥವಾ ಸಿಹಿ ಮತ್ತು ಸ್ವಲ್ಪ ಹುಳಿ ಇರುವ ಹಣ್ಣುಗಳನ್ನ ಆಯ್ಕೆ ಮಾಡಿದರೆ ಉತ್ತಮ ರುಚಿ ಸಿಗುತ್ತದೆ.








