Tumkur | ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ
ತುಮಕೂರು : ನೀರು ಹರಿಯುವುದನ್ನ ನೋಡಲು ಆಟೋದಿಂದ ಕೆಳಗಿಳಿದಿದ್ದ ಚಾಲಕ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ತುಮಕೂರಿನ ದಾನ ಪ್ಯಾಲೇಸ್ ನಲ್ಲಿ ನಡೆದಿದೆ. ಅಮ್ಜದ್, ಕೊಚ್ಚಿಹೋದ ಆಟೋ ಚಾಲಕ.
ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿರುವ ರಾಜಗಾಲುವೆಯಲ್ಲಿ ಮಳೆಯಿಂದ ನೀರು ಹೆಚ್ಚಾಗಿ ರಭಸವಾಗಿ ಹರಿಯುತ್ತಿತ್ತು.
ನೀರು ಹರಿಯುವುದನ್ನ ನೋಡಲು ಆಟೋದಿಂದ ಇಳಿದಿದ್ದ ಎನ್ನಲಾಗಿದೆ.

ಈ ವೇಳೆ ಕಾಲು ಜಾರಿಬಿದ್ದು ಕೊಚ್ಚಿ ಹೋಗಿದ್ದಾನೆ.
ಕೊಚ್ಚಿ ಹೋಗಿರುವ ವ್ಯಕ್ತಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಮುಂದುವರೆದಿದೆ.
ದಾನ ಪ್ಯಾಲೇಸ್ ಬಳಿಯಿರುವ ಬ್ರಿಡ್ಜ್ ಅಕ್ಕ ಪಕ್ಕ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.