Tumkur | ಗಿಣಿ ಹುಡುಕಿಕೊಡಿ 50 ಸಾವಿರ ಬಹುಮಾನ ಗೆಲ್ಲಿ
ತುಮಕೂರು : ಗಿಣಿ ಹುಡುಕಿಕೊಡಿ 50 ಸಾವಿರ ಬಹುಮಾನ ಗೆಲ್ಲಿ !! ಹೌದು..!
ಸಾಮಾನ್ಯವಾಗಿ ಮನೆಯಲ್ಲಿ ಯಾರಾದ್ರೂ ಕಾಣೆಯಾದ್ರೆ ಪ್ರಕಟನೆ ಕೊಡುವುದನ್ನ ನಾವು ನೋಡಿದ್ದೇವೆ.
ಆದ್ರೆ ತುಮಕೂರಿನ ಜಯನಗರ ನಿವಾಸಿವೊಬ್ಬರು ಗಿಣಿ ಕಾಣೆಯಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ರುಸ್ತುಮಾ 2.5 ವರ್ಷದ ಗಿಣಿ ಹೆಸರು.
ಪ್ರಕಟನೆಯಲ್ಲಿ… ನಮ್ಮ ಮನೆಯ ನೆಚ್ಚಿನ ಸದಸ್ಯರಲ್ಲಿ ಒಬ್ಬರಾಗಿದ್ದ ಈ ಮುದ್ದಿನ ಗ್ರೇ ( ಬೂದಿ ) ಬಣ್ಣದ ಗಿಣಿಯು ದಿನಾಂಕ 16-07-2022 ರಂದು ಜಯನಗರ, ತುಮಕೂರಲ್ಲಿ ಕಾಣೆಯಾಗಿದೆ.
ಈ ಗಿಣಿ ಮುಂದೆ ಸಂಪೂರ್ಣ ಗ್ರೇ ( ಬೂದಿ ) ಬಣ್ಣ ಇದ್ದು. ಹಿಂದೆ ಕೆಂಪು ಬಣ್ಣದಿಂದ ಕೂಡಿದೆ.
ಒಂದು ವೇಳೆ ಈ ಗಿಣಿಯೂ ಯಾರಿಗಾದರೂ ಸಿಕ್ಕಿದರೇ ದಯವಿಷ್ಟು ಸಂಪರ್ಕಿಸಿ..
ಹುಡುಕಿ ಕೊಟ್ಟವರಿಗೆ ರೂಪಾಯಿ 50,000 ಬಹುಮಾನ ತಕ್ಷಣ ನೀಡಲಾಗುವುದು ಎಂದು ತಿಳಿಸಲಾಗಿದೆ.