Tumkur | ದೇವಸ್ಥಾನ ಜಾಗಕ್ಕೆ ಗಲಾಟೆ ಇಬ್ಬರ ಹತ್ಯೆ
ತುಮಕೂರು : ದೇವಸ್ಥಾನದ ಜಾಗಕ್ಕಾಗಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಒಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮಿಡಿಗೇಶಿಯಲ್ಲಿ ನಡೆದಿದೆ.
ರಾಮಾಂಜನೇಯ 48 ಹಾಗೂ ಶಿಲ್ಪ 36 ಕೊಲೆಗೀಡಾದ ದುರ್ದೈವಿಗಳಾಗಿದ್ದಾರೆ. ಮಲ್ಲಿಕಾರ್ಜುನಯ್ಯ ಎಂಬುವರಿಗೂ ಕೂಡ ಗಂಭೀರ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿರುವ ಮಲ್ಲಿಕಾರ್ಜುನಯ್ಯ ಅವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಮಿಡಿಯಶಿ ಗ್ರಾಮದ ಶ್ರೀದರ್ ಗುಪ್ತಾ ಎಂಬವರು ಗಣಪತಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪ ವ್ಯಕ್ತವಾಗಿದೆ.

ಹೀಗಾಗಿ ಗ್ರಾಮಸ್ಥರು ಈ ವಿಷಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು ನ್ಯಾಯಾಲಯವು ಗ್ರಾಮಸ್ಥರು ಪರವಾಗಿ ತೀರ್ಪು ನೀಡಿತ್ತು.
ದೇವಸ್ಥಾನದ ಪರವಾಗಿ ರಾಮಾಂಜನೇಯ ಹಾಗೂ ಶಿಲ್ಪ ನ್ಯಾಯಾಲಯದ ಮೊರೆ ಹೋಗಿದ್ದರು.
ಹೀಗಾಗಿ ಶ್ರೀಧರ್ ಗುಪ್ತ ಹಾಗೂ ಸಹಚರರು ನಿನ್ನೆ ರಾತ್ರಿ ಮಾರಕಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಓರ್ವ ಆರೋಪಿಯನ್ನು ಕೂಡ ಬಂಧಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಮಿಡಿಗಿಯಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.