ಟಿವಿ ಮಾಧ್ಯಮ ಸಮಾಜವನ್ನು ಒಡೆಯುತ್ತಿದೆ – ಸುಪ್ರೀಂ ಕೋರ್ಟ್….
ಟಿವಿ ಮಾಧ್ಯಮ ಸಮಾಜವನ್ನು ಒಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.. ದ್ವೇಷ ಭಾಷಣ ಅಪಾಯಕಾರಿ. ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ದೇಶದಾದ್ಯಂತ ದ್ವೇಷ ಭಾಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿ ವಿ ನಾಗರತ್ನಅವರಿದ್ದ ನ್ಯಾಯಪೀಠ,ದ್ವೇಷ ಭಾಷಣ ಅಪಾಯಕಾರಿ, ಅದು ನಿಲ್ಲಲೇಬೇಕು ಎಂದು ಹೇಳಿದೆ.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳು ಟಿಆರ್ ಪಿಗಾಗಿ ಪರಸ್ಪರ ಸ್ಪರ್ಧೆಗೆ ಇಳಿದು, ಸಮಾಜವನ್ನು ಇಭ್ಭಾಗ ಮಾಡುತ್ತಿವೆ. ದ್ವೇಷ ಭಾಷಣ ಬಿತ್ತುವ ಅಜೆಂಡಾಗಳಲ್ಲಿ ಟಿವಿ ನಿರೂಪಕರೂ ಭಾಗಿಯಾಗಿರುವುದು ಅಚ್ಚರಿ ಉಂಟುಮಾಡಿದೆ ಎಂದು ಟಿವಿ ಮಾಧ್ಯಮಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದೆ.
TV media : TV media is breaking society – Supreme Court….








