ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ಕೊರೊನಾಗೆ ಬಲಿ
ಚೆನ್ನೈ, ಜೂನ್ 21: ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ತಮಿಳುನಾಡು ಮೂಲದ ಕಟ್ಟಡ ಸಾಮಗ್ರಿಗಳನ್ನು ತಯಾರಿಸುವ ಭಾರತದ ಖ್ಯಾತ ಸಂಸ್ಥೆಯಾಗಿದೆ. ನಾರಾಯಣಸಾಮಿ ಬಾಲಕೃಷ್ಣನ್ 2008ರಿಂದ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 12 ವರ್ಷಗಳಿಂದ ಅಧ್ಯಕ್ಷರಾಗಿದ್ದ ನಾರಾಯಣಸಾಮಿ ಬಾಲಕೃಷ್ಣನ್ ಅವರನ್ನು ಕೊರೊನಾ ಸೋಂಕು ಬಲಿ ತೆಗೆದು ಕೊಂಡಿದೆ.
ತಮಿಳು ನಾಡಿನ ಚೆನ್ನೈ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ನಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾರಾಯಣಸಾಮಿ ಬಾಲಕೃಷ್ಣನ್ ಅವರ ನಿಧನಕ್ಕೆ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಕಂಪನಿ ಮತ್ತು ಅವರ ಅಭಿಮಾನಿ ಬಳಗ ಕಂಬನಿ ಮಿಡಿದಿದೆ.