ಬೆಂಗಳೂರಿನ ಬಾಲಕರ ವಸತಿ ನಿಲಯದಲ್ಲಿ ಕೊರೊನಾ ಸ್ಫೋಟ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಲಂಗು ಲಗಾಮಿಲ್ಲದಂತೆ ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಿದೆ.
ಪ್ರತಿ ದಿನ ನಗರದಲ್ಲಿ ಕೊರೊನಾ ಮಹಾ ಸ್ಫೋಟವಾಗುತ್ತಿದ್ದು, ನಗರದ ಜೆಎಸ್ಎಸ್ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿನ 20 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಹೀಗಾಗಿ ವಿದ್ಯಾರ್ಥಿಗಳನ್ನು ಜನವರಿ 15ರವರೆಗೂ ಕ್ವಾರಂಟೈನ್ ಮಾಡಲಾಗಿದೆ.
20 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿನ ಎಲ್ಲ ವಿದ್ಯಾರ್ಥಿಗಳನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತ ಹಾಸ್ಟೆಲ್ ಸೀಲ್ಡೌನ್ ಮಾಡಲಾಗಿದೆ.
ಇನ್ನ ಶನಿವಾರ ಬೆಂಗಳೂರಲ್ಲಿ 7,113 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದರೊಂದಿಗೆ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12,90,299ಕ್ಕೆ ಏರಿದೆ.
ನಗರದಲ್ಲಿ ಸದ್ಯ 32,157ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇಕಡಾ 10ಕ್ಕೆ ಬಂದಿದೆ.