ಮಂಗಳೂರು: ತುಳು ಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಿ ಮಾಡುವ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಜೈ ತುಳುನಾಡ್ ಸಂಘಟನೆ ಟ್ವಿಟ್ಟರ್ ಅಭಿಯಾನ ಆರಂಭಿಸಿತ್ತು. ಟ್ವೀಟ್ ತುಳುನಾಡ್ ಅಭಿಯಾನ ಸೋಮವಾರ ಸಂಜೆ 6ರಿಂದ ರಾತ್ರಿ 10ರ ವರೆಗೆ ನಡೆಯಿತು. #TuluOfficialinKA_KL ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅಭಿಯಾನ ನಡೆಸಲಾಯಿತು.
ತುಳು ಅಧಿಕೃತ ರಾಜ್ಯಭಾಷೆ ಮಾಡಬೇಕೆಂಬ ತುಳುನಾಡಿನ ಕೂಗನ್ನು ಈಗಾಗಲೇ ಇಲ್ಲಿನ ಶಾಸಕರು ಸರಕಾರಕ್ಕೆ ತಲುಪಿಸಿದ್ದಾರೆ. ಫೆ. 18ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗುವುದರಿಂದ ಮತ್ತೂಮ್ಮೆ ನೆನಪಿಸುವ ಉದ್ದೇಶದಿಂದ ಹ್ಯಾಶ್‌ಟ್ಯಾಗ್ ಅಭಿಯಾನ ನಡೆಸಲಾಗುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಜೈ ತುಳುನಾಡ್ ಸಂಘಟನೆಯು ಈಗಾಗಲೇ ಹಲವು ಬಾರಿ ಟ್ವಿಟ್ಟರ್ ಅಭಿಯಾನ ನಡೆಸಿ ಜನಪ್ರತಿನಿಧಿಗಳ ಸೆಳೆಯುವಂತೆ ಮಾಡುವಲ್ಲಿ ಪ್ರಯತ್ನಿಸಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ. ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಬೃಂದಾವನ...








