Twitter:ಎಲಾನ್ ಮಸ್ಕ್ ತೀರ್ಮಾನಕ್ಕೆ ಕುಟುಕಿದ ಡೊನಾಲ್ಡ್ ಟ್ರಂಪ್
ತಮ್ಮ ಟ್ವಿಟರ್ ಖಾತೆಯನ್ನು ಮತ್ತೆ ಆಕ್ಟಿವೇಟ್ ಮಾಡಿರುವ ಎಲಾನ್ ಮಸ್ಕ್ (Elon Musk’s)ಅವರ ತೀರ್ಮಾನಕ್ಕೆ ಡೊನಾಲ್ಡ್ ಟ್ರಂಪ್ ಕುಟುಕಿದ್ದಾರೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ವಿಟರ್ ಖಾತೆ ಎರಡು ವರ್ಷಗಳ ಬಳಿಕ ಮತ್ತೆ ಆಕ್ಟಿವೇಟ್ ಆಗಿದೆ.
2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗಿತ್ತು.
ಇದೀಗ ಟ್ವಿಟರ್ ನ ನೂತನ ಮಾಲೀಕ ಎಲಾನ್ ಮಸ್ಕ್, ಟ್ರಂಪ್ ಅವರ ಟ್ವಿಟರ್ ಖಾತೆಯ ಮೇಲಿನ ನಿರ್ಬಂಧ ತೆರವುಗೊಳಿಸಿದ್ದಾರೆ.
ಆದರೆ ಎಲಾನ್ ಮಸ್ಕ್ ಅವರ ತೀರ್ಮಾನಕ್ಕೆ ಕುಟುಕಿರುವ ಡೊನಾಲ್ಡ್ ಟ್ರಂಪ್, ಮತ್ತೆ ಟ್ವಿಟರ್ ಗೆ ಮರಳುವ ಆಸಕ್ತಿ ನನಗಿಲ್ಲ ಎಂದಿದ್ದಾರೆ.
ಟ್ವಿಟರ್ ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ ಎಲಾನ್ ಮಸ್ಕ್, ಅಲ್ಪ ಬಹುಮತದ ಆಧಾರದಲ್ಲಿ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು ಸಕ್ರಿಯಗೊಳಿಸಿದ್ದರು.
ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಅವರ ಟ್ವಿಟ್ಟರ್ ಖಾತೆಯ ನಿರ್ಬಂಧವನ್ನು ತೆರವುಗೊಳಿಸಬೇಕೇ ಎಂದು ಎಲಾನ್ ಮಸ್ಕ್ ಜನಾಭಿಪ್ರಾಯ ಸಂಗ್ರಹಿಸಿದಾಗ ಟ್ರಂಪ್ ಪರ ಅತ್ಯಲ್ಪ ಪ್ರಮಾಣದ ಬಹುಮತ ವ್ಯಕ್ತವಾಗಿತ್ತು.
51.8% ರಷ್ಟು ಮಂದಿ ಟ್ರಂಪ್ ಪರವಾಗಿ ಮತ ಹಾಕಿದ್ದರೆ, 48.2% ರಷ್ಟು ಜನರು, ಟ್ರಂಪ್ ಅವರನ್ನು ಟ್ವಿಟ್ಟರ್ಗೆ ಮರಳಿ ಕರೆಸುವುದು ಬೇಡ ಎಂದು ವೋಟ್ ಮಾಡಿದ್ದರು.