ದೂರು ನಿರ್ವಹಣಾಧಿಕಾರಿ : ಭಾರತೀಯರ ಬದಲು ವಿದೇಶಿಗರನ್ನ ನೇಮಿಸಿ ‘ಐಟಿ’ ನಿಯಮ ಉಲ್ಲಂಘಿಸಿದ ‘ಟ್ವಿಟ್ಟರ್’
ನವದೆಹಲಿ : ದೂರು ನಿರ್ವಹಣಾಧಿಕಾರಿಯನ್ನಾಗಿ ಭಾರತೀಯ ಮೂಲದವನ್ನೇ ನೇಮಿಸಬೇಕು ಎಂಬ ಐಟಿ ನಿಯಮವನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆ ಉಲ್ಲಂಘನೆ ಮಾಡುವ ಮೂಲಕ ಮತ್ತೊಮ್ಮೆ ಕೇಂದ್ರದ ಜೊತೆಗೆ ಸಂಘರ್ಷಕ್ಕೆ ಇಳಿದಿದೆ..
ಹೌದು ಟ್ವಿಟರ್ ಸಂಸ್ಥೆ ದೂರು ನಿರ್ವಹಣಾಧಿಕಾರಿ ಹುದ್ದೆಗೆ ವಿದೇಶಿಗರನ್ನು ನೇಮಿಸಿದೆ. ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಐಟಿ ಕಾಯ್ದೆಯ ಪ್ರಕಾರ ಟ್ವಿಟರ್ ಸೇರಿ ಎಲ್ಲಾ ಮಿನಿ ಬ್ಲಾಗಿಂಗ್ ಸೈಟ್‍ಗಳು ತಲಾ 50 ಲಕ್ಷ ಗ್ರಾಹಕರಿಗೆ ಒಬ್ಬರಂತೆ ದೂರು ನಿರ್ವಹಣಾಧಿಕಾರಿಯನ್ನು ನೇಮಿಸಬೇಕು.
ಟ್ವಿಟರ್ ಮೂರು ಮಂದಿ ಅಧಿಕಾರಿಗಳನ್ನು ನೇಮಿಸಬೇಕಿತ್ತು. ಆದರೆ ಧರ್ಮೇಂದ್ರ ಚತ್ತೂರ್ ಅವರನ್ನು ನೇಮಿಸಿತ್ತು. ಅವರು ಒಂದು ದಿನದ ಹಿಂದಷ್ಟೆ ರಾಜೀನಾಮೆ ನೀಡಿ ಹೋಗಿದ್ದರು. ಅದರ ಬೆನ್ನಲ್ಲೆ ಸೋಮವಾರ ಬೆಳಗ್ಗೆ ಹೊಸ ಅಧಿಕಾರಿಯನ್ನು ನೇಮಿಸಿರುವುದಾಗಿ ಟ್ವಿಟರ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ನಿಯೋಜಿತ ಅಧಿಕಾರಿ ಜೆರ್ಮಿ ಕೆಸ್ಸೆಲ್ ಅವರು ಕ್ಯಾಲಿಫೋರ್ನಿಯಾ ಮೂಲದವರಾಗಿದ್ದಾರೆ. ದೂರು ನಿರ್ವಹಣಾಧಿಕಾರಿಯನ್ನಾಗಿ ಭಾರತೀಯ ಮೂಲದವನ್ನೇ ನೇಮಿಸಬೇಕು ಎಂಬ ನಿಯಮವನ್ನು ಟ್ವಿಟರ್ ಉಲ್ಲಂಘಿಸಿದೆ. ಜೊತೆಗೆ ಮೂವರ ಬದಲಿಗೆ ಒಬ್ಬರನ್ನು ಮಾತ್ರ ನೇಮಿಸಿ ಕೇಂದ್ರ ಸರ್ಕಾರದ ಆದೇಶವನ್ನು ಧಿಕ್ಕರಿಸಿದೆ. ಈ ಮೂಲಕ ಮತ್ತೊಮ್ಮೆ ಕೇಂದ್ರದ ವಿರೋಧ ಕಟ್ಟುಕೊಂಡು ಸಮರಕ್ಕೆ ಸಿದ್ಧವಾಗಿದೆ..
ಕೊರೊನಾ ಸಂಕಷ್ಟ : 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ
ಮ್ಯಾನ್ಮಾರ್ ಸಂಘರ್ಷ : ಮಿಜೋರಾಂಗೆ ನುಸುಳಿದ 10,025 ಮ್ಯಾನ್ಮಾರ್ ಪ್ರಜೆಗಳು, ಒಂದೇ ವಾರದಲ್ಲಿ 700 ಮಂದಿ ಆಗಮನ
“ಮೊದಲು ಲಸಿಕೆ, ಆಮೇಲೆ ‘ಮನ್ ಕೀ ಬಾತ್” – ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ