ಕಲಬುರಗಿ: ಮೊಬೈಲ್ ವಿಚಾರವಾಗಿ ತಂದೆ-ತಾಯಿ ಜತೆ ಜಗಳವಾಡಿದ್ದ ಅಣ್ಣ-ತಮ್ಮ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಸುನೀಲ್(17), ಶೇಖರ್(12) ಆತ್ಮಹತ್ಯೆಗೆ ಶರಣಾದ ಸಹೋದರರು.

ತಮಗೆ ಮೊಬೈಲ್ ಕೊಡಿಸುವಂತೆ ಸಹೋದರರು ತಂದೆ-ತಾಯೊ ಜತೆ ಜಗಳವಾಡಿಕೊಂಡಿದ್ದರು. ತಂದೆ ಮೊಬೈಲ್ ಕೊಡಿಸಲು ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಮನನೊಂದ ಸಹೋದರರು ನೇರವಾಗಿ ಹೊಲಕ್ಕೆ ಹೋಗಿದ್ದಾರೆ. ಹೊಲದಲ್ಲಿದ್ದ ಬಾವಿಗೆ ಇಬ್ಬರೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರಿಗೂ ಈಜು ಬರುತ್ತಿತ್ತು. ಒಂದು ವೇಳೆ ನೀರಿನಿಂದ ಮೇಲೆ ಬಂದರೆ ಈಜಿ ದಡಸೇರಬಹುದು. ಹಾಗಾಗಬಾರದು ಎಂಬ ಕಾರಣಕ್ಕೆ ಸೊಂಟಕ್ಕೆ ಕಲ್ಲುಕಟ್ಟಿಕೊಂಡು ಬಾವಿಗೆ ಜಿಗಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಿಂಬರ್ಗಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








