ತುಮಕೂರು: ಜಮೀನಿನಲ್ಲಿ ಪೋಷಕರು ಕೆಲಸ ಮಾಡುತ್ತಿರುವಾಗ ಆಟವಾಡುತ್ತಿದ್ದ ಮಕ್ಕಳಿಬ್ಬರು ಕೃಷಿ ಹೊಂಡಕ್ಕೆ ಬಿದ್ದು ನೀರುಪಾಲಾದ ದಾರುಣ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಮರಿತಿಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶರತ್(5), ಲೋಚನ(3) ನೀರುಪಾಲಾದ ಮಕ್ಕಳು.
ಮರಿತಿಮ್ಮನಹಳ್ಳಿಯ ಕೃಷ್ಣ ಹಾಗೂ ಅವರ ಪತ್ನಿ ತಮ್ಮ ಜಮೀನಿನಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹೆಚ್ಚಾಗಿ ಬೆಳೆದಿದ್ದ ಕಳೆ ತೆಗೆಯುವಲ್ಲಿ ಮಗ್ನರಾಗಿದ್ದರು. ಕೊರೊನಾ ಕಾರಣದಿಂದಾಗಿ ಶಾಲೆ ತೆರೆಯದ ಕಾರಣ ಪೋಷಕರ ಜತೆ ಹೊಲಕ್ಕೆ ತೆರಳಿದ್ದ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದರು. ಮಕ್ಕಳು ಕೃಷಿ ಹೊಂಡದ ಬಳಿ ಹೋಗಿರುವುದು ಪೋಷಕರ ಗಮನಕ್ಕೆ ಬರಲೇ ಇಲ್ಲ. ಈ ವೇಳೆ ಕಾಲು ಜಾರಿ ಇಬ್ಬರೂ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ತಮ್ಮ ಕಣ್ತಪ್ಪಿನಿಂದಾಗಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Commercial Cylinder Price down ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬಳಕೆದಾರರಿಗೆ ಸಂತಸ ಸುದ್ದಿ
Commercial Cylinder Price down- 2024ರ ಆರ್ಥಿಕ ವರ್ಷದ ಮೊದಲ ದಿನವೇ ಸಂತಸದ ಸುದ್ದಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬಳಕೆದಾರರಿಗೆ ಸಂತಸ ಸುದ್ದಿ ಬೆಲೆಗಳಲ್ಲಿ ಭಾರೀ ಇಳಿಕೆ...