Delhi: ದೆಹಲಿಯಲ್ಲಿ 2 ಕಡೆ ಅಗ್ನಿ ದುರಂತ | ಅಗ್ನಿಶಾಮಕ ದಳದ 6 ಸಿಬ್ಬಂದಿಗೆ ಗಾಯ

1 min read
Delhi Saaksha Tv

ದೆಹಲಿಯಲ್ಲಿ 2 ಕಡೆ ಅಗ್ನಿ ದುರಂತ | ಅಗ್ನಿಶಾಮಕ ದಳದ 6 ಸಿಬ್ಬಂದಿಗೆ ಗಾಯ

ನವದೆಹಲಿ: ಬೆಳ್ಳಂ ಬೆಳಿಗ್ಗೆ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿರುವ ಘಟನೆ ಆನಂದ್ ಪರ್ಬತ್ ಕೈಗಾಆರಿಕಾ ಪ್ರದೇಶದಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಯಾ ಸಂಭವಿಸಿಲ್ಲ. ಆದರೆ ಬೆಂಕಿ ನಂದಿಸಲು ಬಂದ ಅಗ್ನಿಶಾಮಕದಳದ 6 ಮಂದಿ ಸಿಬ್ಬಂದಿಗಳು  ಗಾಯಗೊಂಡಿದ್ದು, ಅವರನ್ನು ಬಿ ಎಲ್ ಕಪೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

https://twitter.com/ANI/status/1512604892413964290/photo/3

ಈ ಅಗ್ನಿ ದುರಂತಕ್ಕೂ ಮೊದಲು ದೆಹಲಿ ಮೊತ್ತೊಂದು ಭಾಗ ಆಜಾದ್ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ 3 ಕಟ್ಟಡಗಳು, ಐದು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸುಮಾರು 20 ಅಗ್ನಿ ನಿಷ್ಕ್ರಿಯ ವಾಹನಗಳ ಮೂಲಕ ಬೆಂಕೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಫೈರ್ ವಿಭಾಗೀಯ ಅಧಿಕಾರಿ ರಾಜೇಂದರ್ ಅಟಾವಲ್ ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ಇನ್ನೂ ಒಂದೇ ದಿನ ರಡು ಕಡೆ ಅಗ್ನಿ ದುರಂತ ಸಂಬಂಭವಿಸಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd