5 ಕೋಟಿ ರೂ ಮೌಲ್ಯದ ಡಗ್ಸ ವಶಪಡಿಸಿಕೊಂಡ ಪೊಲೀಸರು…
ಹೊಸ ವರ್ಷದ ಆಚರಣೆಯ ವೇಳೆ ಮಾರಟಕ್ಕೆಂದು ತಂದಿದ್ದ ಮಾದಕ ವಸ್ತು ಗಳನ್ನ ಬೆಂಗಳೂರು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
5 ಕೋಟಿ ರೂ ಮೌಲ್ಯದ 5ಕೆಜಿ ಹ್ಯಾಸ್ ಹಾಯಿಲ್ ಮತ್ತು ಒಂದು ಕೆಜಿ ಗಾಂಜಾ ಮಾರಟಕ್ಕೆ ಬಂದಿದ್ದ ಇಬ್ಬರು ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಮಾರಾಟದ ಬಗ್ಗೆ ಪಕ್ಕ ಮಾಹಿತಿ ಪಡೆದಿದ್ದ ಮೈಕೋ ಲೇಔಟ್ ಪೊಲೀಸರು ಆಂಧ್ರಪ್ರದೇಶದ ಪ್ರಕಾಶ್ ಮತ್ತು ದಾರಾಸ್ವಾಮಿ ಡ್ರಗ್‍ಪೆಡ್ಲರ್‍ಗಳನ್ನು ಬಂಧಿಸಿವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರದ ಎಸ್‍ಎನ್‍ಎನ್ ಅಪಾರ್ಟ್‍ಮೆಂಟ್ ರಸ್ತೆಯ ಹತ್ತಿರ ಸಂಗ್ರಹಿಸಿಟ್ಟಿದ್ದ ಗಾಂಜಾ ಮತ್ತು ಹ್ಯಾಸ್ ಹಾಯಿಲ್ ನ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರಿಗೆ ತಂದು ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಕಂಪೆನಿಗಳ ನೌಕರರಿಗೆ ಮಾರಟ ಮಾಡುತ್ತಿದ್ದರು ಎನ್ನಲಾಗಿದೆ.








