ಐಪಿಎಲ್ – ಹೊಸ ಎರಡು ತಂಡಗಳ ಬಿಡ್ಡಿಂಗ್ ಮೂಲ ಬೆಲೆ 1500 ಕೋಟಿ ರೂ…?

1 min read
IPL Auction

ಐಪಿಎಲ್ – ಹೊಸ ಎರಡು ತಂಡಗಳ ಬಿಡ್ಡಿಂಗ್ ಮೂಲ ಬೆಲೆ 1500 ಕೋಟಿ ರೂ…?

IPL 2022: Two new IPL teams to be auctioned in May, base price can exceed 1500 Cr ?

ipl saakshatv bcciಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದ್ದು, ಐಪಿಎಲ್ ಫ್ರಾಂಚೈಸಿಗಳು ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿವೆ.
ಇದ್ರ ಬೆನ್ನಲ್ಲೇ ಬಿಸಿಸಿಐ 2022ರ ಐಪಿಎಲ್ ಟೂರ್ನಿಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ನೇತ್ವತ್ವದಲ್ಲಿ ಸಭೆ ಕೂಡ ನಡೆದಿದೆ.
ಅಂದ ಹಾಗೇ 15ನೇ ಆವೃತ್ತಿ ಅಂದ್ರೆ, 2022ರ ಐಪಿಎಲ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಲಿದೆ. ಈಗಿರುವ ಎಂಟು ತಂಡಗಳ ಜೊತೆ ಇನ್ನೆರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ.
ಹೊಸದಾಗಿ ಸೇರ್ಪಡೆಯಾಗುವ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮೇ ತಿಂಗಳಿನಲ್ಲಿ ನಡೆಯಲಿದೆ. ಬಿಡ್ಡಿಂಗ್ ಪ್ರಕ್ರಿಯೆಗೂ ಬಿಸಿಸಿಐ ಯೋಜನೆ ಹಾಕಿಕೊಂಡಿದೆ.
ಆದ್ರೆ ಹೊಸ ಐಪಿಎಲ್ ತಂಡಗಳನ್ನು ಖರೀದಿಸಲು ಅಷ್ಟೊಂದು ಸುಲಭವಿಲ್ಲ. ಭಾರೀ ಮೊತ್ತವನ್ನು ಬಿಸಿಸಿಐಗೆ ಪಾವತಿಸಬೇಕಿದೆ. ಸದ್ಯದ ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ವ್ಯಾಲ್ಯೂ ಸಾವಿರ ಕೋಟಿಗೂ ಅಧಿಕವಿರುತ್ತದೆ. ಹೀಗಾಗಿ ಹೊಸ ತಂಡಗಳನ್ನು ಖರೀದಿ ಮಾಡಬೇಕಾದ್ರೆ ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಪಾವತಿಸಬೇಕು.
ಬಿಸಿಸಿಐ ಮೂಲಗಳ ಪ್ರಕಾರ ಹೊಸ ಎರಡು ತಂಡಗಳ ಬಿಡ್ಡಿಂಗ್ ನ ಮೂಲ ಬೆಲೆ 1500 ಕೋಟಿಗೂ ಅಧಿಕವಿರುತ್ತದೆ. ಅದಕ್ಕಿಂತ ಕಡಿಮೆಯಂತೂ ಇರಲ್ಲ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಬಿಸಿಸಿಐ ಸಭೆಯಲ್ಲಿ ಚರ್ಚೆ ಕೂಡ ಮಾಡಿದ್ದಾರೆ.
14 ವರ್ಷಗಳ ಹಿಂದೆ ಈಗಿರುವ ಎಂಟು ಫ್ರಾಂಚೈಸಿಗಳ ಮೊತ್ತ ನೋಡಿದ್ರೆ ತುಂಬಾನೇ ಕಮ್ಮಿ ಆದ್ರೆ ಈಗೀನ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ದುಪ್ಪಟ್ಟು ಆಗಿದೆ.

IPL 2021: Two new IPL teams to be auctioned in May, base price can exceed 1500 Cr ?

ipl saakshatv bcciಇನ್ನು ಹೊಸ ಎರಡು ತಂಡಗಳ ಖರೀದಿಗೆ ಭಾರೀ ಪೈಪೋಟಿಯನ್ನು ನಿರೀಕ್ಷೆ ಮಾಡಲಾಗಿದೆ. ಗುಜರಾತ್ ಮತ್ತು ಕೇರಳ ಫ್ರಾಂಚೈಸಿಗಳ ಖರೀದಿ ನಡೆಯಲಿದ್ದು ಯಾರು ಖರೀದಿ ಮಾಡುತ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ. ಇನ್ನು ಗುಜರಾತು ತಂಡವನ್ನು ಅದಾನಿ ಗ್ರೂಪ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾಗೇ ಕೇರಳ ಫ್ರಾಂಚೈಸಿಯನ್ನು ನಟ ಮೋಹನ್ ಲಾಕ್ ಉತ್ಸುಕರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಮುತ್ತೂಟ್ ಫಿನಾನ್ಸ್, ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಕೂಡ ಐಪಿಎಲ್ ಫ್ರಾಂಚೈಸಿಯನ್ನು ಖರೀದಿ ಮಾಡುವ ಉಮೇದಿನಲ್ಲಿದ್ದಾರೆ.

2008ರಲ್ಲಿ ಎಂಟು ಫ್ರಾಂಚೈಸಿಗಳ ಬೆಲೆ ಈ ರೀತಿಯಾಗಿದೆ.

ಮುಂಬೈ ಇಂಡಿಯನ್ಸ್ – 111.5 ಮಿಲಿಯನ್ ಡಾಲರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು – 111.6 ಮಿಲಿಯನ್ ಡಾಲರ್

ಡೆಕ್ಕನ್ ಚಾರ್ಜರ್ಸ್ (ಈಗಿನ ಸನ್ ರೈಸರ್ಸ್ ಹೈದ್ರಬಾದ್ )- 107 ಮಿಲಿಯನ್ ಡಾಲರ್

ಚೆನ್ನೈ ಸೂಪರ್ ಕಿಂಗ್ಸ್ – 91ಮಿಲಿಯನ್ ಡಾಲರ್

ಕಿಂಗ್ಸ್ ಇಲೆವೆನ್ ಪಂಜಾಬ್ – 76ಮಿಲಿಯನ್ ಡಾಲರ್

ಕೊಲ್ಕತ್ತಾ ನೈಟ್ ರೈಡರ್ಸ್ – 75.09 ಮಿಲಿಯನ್ ಡಾಲರ್

ರಾಜಸ್ತಾನ ರಾಯಲ್ಸ್ -67 ಮಿಲಿಯನ್ ಡಾಲರ್

#IPL 2021 #IPL2022 #bcci #ipl #saakshatvsports

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd