ಮಾರ್ಚ್ 31 ರಿಂದ ಟು-ಸ್ಟ್ರೋಕ್ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ – Saaksha Tv
ಬೆಂಗಳೂರು: ಮಾರ್ಚ್ 31 ರಿಂದ ಟು-ಸ್ಟ್ರೋಕ್ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವಾಯು ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಟು- ಸ್ಟ್ರೋಕ್ ಕಂಪ್ಲೀಟ್ ಬ್ಯಾನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ 1 ರಿಂದ ಟು-ಸ್ಟ್ರೋಕ್ ಆಟೋ ಸಂಚಾರ ಮಾಡುವಂತಿಲ್ಲ. ಹೆಚ್ಚು ಹೊಗೆ ಉಗುಳೋ ಕಾರಣದಿಂದ ಟು-ಸ್ಟ್ರೋಕ್ ನಿಷೇಧ ಮಾಡಲಾಗುತ್ತಿದ್ದು, ಎರಡು ವರ್ಷಗಳ ಹಿಂದೆ ಟು-ಸ್ಟ್ರೋಕ್ ಸ್ಕ್ರ್ಯಾಫ್ ಮಾಡಿ 4 ಸ್ಟ್ರೋಕ್ ಖರೀದಿಸುವಂತೆ ಸೂಚಿಸಲಾಗಿತ್ತು. ಆದರೆ ಕರೊನಾ ಕಾರಣದಿಂದ ಚಾಲಕರ ಆರ್ಥಿಕ ಸಮಸ್ಯೆಯಿಂದ 4 ಸ್ಟ್ರೋಕ್ ಮಾರ್ಪಾಡು ಆಗಲಿಲ್ಲ.
ಸದ್ಯಕ್ಕೆ ಏಪ್ರಿಲ್ 1 ರಿಂದ ಟು ಸ್ಟ್ರೋಕ್ ಆಟೋ ಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವುದನ್ನ ನಿಷೇಧಿಸಲಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಬೆಂಗಳೂರಿನಲ್ಲಿ 10 ಸಾವಿರ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇದೆ. ಎಲ್ಲಾ ಟು-ಸ್ಟ್ರೋಕ್ ಅಟೋಗಳಿಗೆ ಏಪ್ರಿಲ್ನಿಂದ ಎಫ್ಸಿ ಮಾಡದಂತೆ ಸೂಚನೆ ನೀಡಲಾಗಿದೆ.
ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಟು-ಸ್ಟ್ರೋಕ್ ಆಟೋ ರಸ್ತೆಗಿಳಿದರೆ ಭಾರಿ ದಂಡ ಬೀಳಲಿದೆ. ಈ ಹಿಂದೆ ಟು-ಸ್ಟ್ರೋಕ್ ಬದಲಾಗಿ 4 ಸ್ಟ್ರೋಕ್ ಮಾರ್ಪಾಡಿಗೆ 30 ಸಾವಿರ ಸಬ್ಸಿಡಿ ನೀಡಿತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ, 50 ಸಾವಿರ ಸಬ್ಸಿಡಿ ನೀಡುವಂತೆ ಚಾಲಕರು ಮನವಿ ಮಾಡಿದರು.








