ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು bhadra saaksha tv
ಚಿಕ್ಕಮಗಳೂರು : ಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಕಳಸ ತಾಲೂಕಿನ ರುದ್ರಪಾದ ಬಳಿ ನಡೆದಿದೆ.
17 ವರ್ಷದ ಜೀವನ್ ದಾಸ್ ಮತ್ತು ನಿಕ್ಷೇಪ್ ಮೃತ ವಿದ್ಯಾರ್ಥಿಗಳಾಗಿದ್ದು, ಜೀವನ್ ದಾಸ್ ಮೃತದೇಹ ಪತ್ತೆಯಾಗಿದೆ.
ನೀರು ಪಾಲಾಗಿರುವ ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್ ಗಾಗಿ ಶೋಧ ಮುಂದುವರೆದಿದೆ.
ಈ ಇಬ್ಬರು ಗುರುವಾರ ಕಾಲೇಜಿಗೆ ಹೋಗಿ ವಾಪಸ್ ಮನೆಗೆ ಬಂದಿರಲಿಲ್ಲ.
ಇದರಿಂದ ಗಾಬರಿಗೊಂಡ ಮನೆಯವರು ಇಂದು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಭದ್ರಾ ನದಿಯ ದಡದಲ್ಲಿ ಅವರ ಮೊಬೈಲ್, ಡ್ರೆಸ್ ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈಜುಗಾರರು ನದಿಗೆ ಇಳಿದು ಶೋಧ ನಡೆಸಿದಾರೆ.
ಈ ವೇಳೆ ಜೀವನ್ ದಾಸ್ ಮೃತದೇಹ ಪತ್ತೆಯಾಗಿದೆ.









