ಯುಎಸ್ ನಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ತೆಲಂಗಾಣದ (Telangana) ವನಪರ್ತಿಯ ಓರ್ವ ವಿದ್ಯಾರ್ಥಿ ಹಾಗೂ ಆಂಧ್ರದ (Andhra Pradesh) ಶ್ರೀಕಾಕುಲಂನ ಮತ್ತೋರ್ವ ವಿದ್ಯಾರ್ಥಿಯೇ ಶವವಾಗಿ ಪತ್ತೆಯಾಗಿದ್ದಾರೆ. ವನಪರ್ತಿಯ ಜಿ ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಶವವಾಗಿ ಪತ್ತೆಯಾದ ವಿದ್ಯಾರ್ಥಿಗಳು ಎನ್ನಲಾಗಿದೆ. ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಅವರ ಸಾವಿಗೆ ಕಾರಣ ಹಾಗೂ ಅವರ ರೂಮ್ ಮೇಟ್ಸ್ ಕುರಿತು ಮಾಹಿತಿ ಇಲ್ಲ.
ಇವರು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದರು. ಪರಸ್ಪರ ಗೊತ್ತಿರುವ ಗೆಳೆಯರು ಇದ್ದ ಕಾರಣ ಇವರಿಬ್ಬರು ಸ್ನೇಹಿತರಾಗಿದ್ದರು ಎನ್ನಲಾಗಿದೆ.








