(u- turn)
ಕನ್ನಡದ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗುವುದು ತುಸು ಅಪರೂಪ..
ಆದ್ರೆ ಇದೀಗ ಸ್ಯಾಂಡಲ್ ವುಡ್ ಗೆ ಹೆಮ್ಮೆ ಎಂಬಂತೆ ಕನ್ನಡದ ಚಿತ್ರವೊಂದು ವಿದೇಶಿ ಭಾಷೆಗೆ ರೀಮೇಕ್ ಆಗುತ್ತಿದೆ..
ಹೌದು ಕನ್ನಡ ಅಷ್ಟೇ ಅಲ್ಲದೇ ಪರಭಾಷೆಗಳಲ್ಲು ಪರಾಭವ ಮೆರೆದಿದ್ದ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಚಿತ್ರ ಯು -ಟರ್ನ್ ಇದೀಗ ವಿದೇಶಿ ಭಾಷೆಗೆ ರೀಮೇಕ್ ಆಗುತ್ತಿದೆ..
ಫಿಲಿಪೀನ್ಸ್ ದೇಶದ ರಾಷ್ಟ್ರಭಾಷೆ ಫಿಲಿಫೀನೊ ಗೆ ಯು -ಟರ್ನ್ ರೀಮೇಕ್ ಆಗುತ್ತಿದೆ..
ಸಿನಿಮಾದ ಪೋಸ್ಟರ್ ಸಹ ಈಗಾಗಲೇ ಬಿಡುಗಡೆ ಆಗಿದೆ. ಫಿಲಿಫಿನೋ ಭಾಷೆಯಲ್ಲಿ ಸಹ ಸಿನಿಮಾಕ್ಕೆ ಯೂ-ಟರ್ನ್ ಎಂದೇ ಹೆಸರಿಡಲಾಗಿದೆ.
ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು..
ವಿವಿಧ ಭಾಷೆಗಳಿಗೆ ರೀಮೇಕ್ ಆಗಿ ಸಕ್ಸಸ್ ಕಂಡಿತ್ತು. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು..
ಇನ್ನೂ ತಮಿಳು ಹಾಗೂ ತೆಲುಗಿನಲ್ಲಿ ಸಮಂತಾ ಹಾಗೂ ಭೂಮಿಕಾ ಕಾಣಿಸಿಕೊಂಡಿದ್ದಾರೆ.
ಸದ್ಯ ರಿಲೀಸ್ ಆಗಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದ್ದ ಕನ್ನಡದ U – ಟರ್ನ್ ಚಿತ್ರದ ಫಿಲಿಫಿನೋ ಭಾಷೆಯ ರೀಮೇಕ್ ಗೆ ಡೆರಿಕ್ ಕ್ಯಾಬ್ರಿಡೊ ಎಂಬುವರು ಆಕ್ಷನ್ ಕಟ್ ಹೇಳ್ತಿದ್ದಾರೆ.
ಕಿಮ್ ಚುವೊ ಎಂಬುವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನ್ನೂ ಈ ಸಿನಿಮಾ ಇದೇ ತಿಂಗಳ 30 ರಂದು ಬಿಡುಗಡೆ ಆಗಲಿದೆ.
ಧಾರಾವಾಹಿಗೆ ಎಂಟ್ರಿ ಕೊಟ್ಟ ಹರಿಪ್ರಿಯಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel