ಐಪಿಎಲ್ 2021 -ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಯುಎಇ ನಲ್ಲಿ ಆಟ ಶುರು..!
ಮಹಾಮಾರಿ ಕೋವಿಡ್ ನಡುವೆಯೂ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಸ್ಥಗಿತಗೊಂಡಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮುಂದುವರಿಯಲಿದೆ. ಮುಂಬರುವ ಸೆಪ್ಟಂಬರ್ – ಅಕ್ಟೋಬರ್ ನಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಆಕ್ಟೋಬರ್ ನಲ್ಲಿ ಯುಎಇನಲ್ಲಿ ಆಯೋಜಿಸಲು ಇಂದು ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಐಪಿಎಲ್ ನಲ್ಲಿ ಇನ್ನೂ 31 ಪಂಂದ್ಯಗಳು ಬಾಕಿ ಇವೆ. ಕಳೆದ ಬಾರಿಯಂತೆ ಯುಎಇ ನಲ್ಲಿ ಜೈವಿಕ ಸುರಕ್ಷತೆಯಡಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದು.
ಈ ನಡುವೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸುವುದು ಕಷ್ಟವಾಗಿದೆ. ಯಾಕಂದ್ರೆ ಅಂತಾರಾಷ್ಟ್ರೀಯ ವೇಳಾಪಟ್ಟಿಯಂತೆ ಇಂಗ್ಲೆಂಡ್ ಸರಣಿಯನ್ನು ಆಡಲಿದೆ. ಈ ಬಗ್ಗೆಯೂ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ನಡೆಸಲಿದೆ.
ಇನ್ನು ಭಾರತದಲ್ಲಿ ನಡೆದಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಕೆಲವೊಂದು ಫ್ರಾಂಚೈಸಿಗಳ ಆಟಗಾರರಿಗೆ ಕೋವಿಡ್ ಸೋಂಕು ವಕ್ಕರಿಸಿರುವ ಕಾರಣದಿಂದಾಗಿ ಬಿಸಿಸಿಐ ಪ್ರತಿಷ್ಠಿತ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು.