ಮದುವೆ ಮನೆಗೆ ಆಗಮಿಸಿದ್ದ ಯುವತಿ ಕುಳಿತಲ್ಲೇ ಕುಸಿದು ಬಿದ್ದು ಸಾವು….
ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಯುವತಿ ಡಿಡೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಜರುಗಿದೆ. ಸಂಬಂಧಿಕರ ರೋಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿ ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಕುಸಿದು ಬಿದ್ದಿದ್ದಾರೆ.
ಬ್ರಹ್ಮಾವರ ತಾಲೂಕು, ಕೊಳಲಗಿರಿಯ ಸಮೀಪದ ಹಾವಂಜೆಯ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮ ರೋಸ್ ಗೆ ಎಂದು ಬಂದಿದ್ದರು. ರಾತ್ರಿ ಸುಮಾರು 8:30 ಕ್ಕೆ ಯುವತಿ ಕುಳಿತಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಯುವತಿಯನ್ನು ಆಕೆಯ ಸಂಬಂಧಿಕರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಜೋಸ್ನಾ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಯೋಸ್ನಾಗೆ ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
Udupi: A young woman who arrived at the marriage house collapsed and died while sitting.