ಉಡುಪಿ : ಮಣಿಪಾಲ ವಿವಿಯಲ್ಲಿ ಕೊರೊನಾ ಸ್ಫೋಟ

1 min read
Bangalore

ಉಡುಪಿ : ಮಣಿಪಾಲ ವಿವಿಯಲ್ಲಿ ಕೊರೊನಾ ಸ್ಫೋಟ

ಉಡುಪಿ : ಉಡುಪಿಯಲ್ಲಿ ನಾಲ್ಕು ದಿನದಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಣಿಪಾಲ ಕ್ಯಾಂಪಸ್ ನಲ್ಲಿ ಒಟ್ಟು 95 ಕೇಸುಗಳು ಪತ್ತೆಯಾಗಿವೆ ಎಂದು ಉಡುಪಿ ಡಿಹೆಚ್ ಓ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಮಣಿಪಾಲ ಕ್ಯಾಂಪಸ್ ನಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕ್ಯಾಂಪಸನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಎಂಐಟಿ ಕ್ಯಾಂಪಸ್ ನ 5000 ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಅದರಂತೆ ಒಂದು ವಾರ ನಿರಂತರ ಕೋವಿಡ್ ಟೆಸ್ಟ್ ಮಾಡುತ್ತೇವೆ. ನಗರ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗುತ್ತಿವೆ.

Udupi

ಈ ಹಿನ್ನೆಲೆ ಸಾರ್ವಜನಿಕ ಸ್ಥಳ, ಸಮಾರಂಭಗಳಲ್ಲಿ ನಿಗಾ ವಹಿಸುತ್ತೇವೆ. ಮಾಸ್ಕ್ ಸಾಮಾಜಿಕ ಅಂತರ ಸ್ಯಾನಿಟೈಸ್ ಕಡ್ಡಾಯವಾಗಿ ಬಳಸಿ. ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಮರುಕಳಿಸಲು ಅವಕಾಶ ಕೊಡಬೇಡಿ ಎಂದು ಡಾ ಸುಧೀರ್ ಚಂದ್ರ ಸೂಡಾ ಮನವಿ ಮಾಡಿಕೊಂಡಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd