ಮದುವೆ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಿರಿ : ಉಡುಪಿ ಡಿಸಿ ಮನವಿ

1 min read
udupi

ಮದುವೆ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಿರಿ : ಉಡುಪಿ ಡಿಸಿ ಮನವಿ udupi

ಉಡುಪಿ : ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮದುವೆ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಿರಿ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಿಸಿದೆ.

ಈ ಮಧ್ಯೆ ಮದುವೆ ಕಾರ್ಯಕ್ರಮಗಳು ಕೂಡ ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಜಿಲ್ಲೆಯ ಜನರ ಬಳಿ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

udupi

ನಾನು ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ.

ಆದಷ್ಟು ಮದುವೆಗಳನ್ನು ಮುಂದೂಡಿದರೆ ಒಳಿತು. ಮದುವೆ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಿರಿ ಎಂದು ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಡಿಸಿ ಕರೆ ಕೊಟ್ಟಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd