Udupi
ಉಡುಪಿ: ಬರೋಬ್ಬರಿ 13 ವರ್ಷ ಪ್ರೇಮಿಸಿದ್ದ ಯುವಕ ಮದ್ವೆ ಸಮಯಕ್ಕೆ ಸರಿಯಾಗಿ ಪರಾರಿಯಾಗಿದ್ದಾನೆ. ಇದರಿಂದಾಗಿ ಮದುವೆಯ ಕನಸು ಕಾಣುತ್ತಿದ್ದ ಯುವತಿಗೆ ದೊಡ್ಡ ಆಘಾತ ಉಂಟಾಗಿದೆ. ಉಡುಪಿಯಲ್ಲಿ ಈ ಘಟನೆ ನಡೆದಿದ್ದು, ಮದುವೆ ದಿನವೇ ಎಸ್ಕೇಪ್ ಆಗಿರೋ ಯುವಕನಿಗಾಗಿ ಹುಡುಕಾಟ ನಡೆಸಲಾಗ್ತಾಯಿದೆ.

ಮಣಿಪಾಲದ ಯುವತಿ ಮತ್ತು ಹ್ಯಾಂಗ್ಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರ್ಕಳದ ಯುವಕ ಗಣೇಶ್ ಬರೋಬ್ಬರಿ 13 ವರ್ಷ ಒಬ್ಬರನೊಬ್ಬರು ಪ್ರೀತಿಸಿ ಇನ್ನೇನು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವ ಸಿದ್ಧತೆ ನಡೆಸಿಕೊಂಡಿದ್ದರು. ಈ ಮೂಲಕ ಇವರ ವರ್ಷಗಳ ಪ್ರೀತಿ ಸುಖಾಂತ್ಯ ಕಾಣಬೇಕಾಗಿತ್ತು. ಆದ್ರೆ ಮದುವೆಯ ದಿನವೇ ಮಧುಮಗ ಗಣೇಶ್ ಎಸ್ಕೇಪ್ ಆಗಿದ್ದಾನೆ. ಇತ್ತ ಘಟನೆಯಿಂದಾಗಿ ಮನನೊಂದ ಯುವತಿ ಪ್ರೇಮಿಯ ಮನೆ ಮುಂದೆ ಕೂತು ಪ್ರತಿಭಟನೆ ಮಾಡಿದ್ದಾಳೆ.
ಬಾಲಕನ ಬಲಿ ಪಡೆದ ಗ್ರಾನೈಟ್ ಕ್ವಾರಿ: ಜಮೀನು ಮಾಲೀಕರ ವಿರುದ್ಧ ಕೇಸ್ ದಾಖಲು..!
ಬರಿ ಪ್ರೀತಿ ಅಷ್ಟೇ ಅಲ್ಲ. ಇವರಿಬ್ಬರ ಸಂಬಂಧ ಒಂದು ಹೆಜ್ಜೆ ಮುಂದಕ್ಕೂ ಹೋಗಿದೆ. ಗಣೇಶ್ ಯುವತಿಯ ಜೊತೆಗೆ ದೈಹಿಕ ಸಂರ್ಪಕವನ್ನೂ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇನ್ನೂ ಇದರಿಂದಾಗಿ ಈಗಾಗಲೇ ಯುವತಿ ಎರಡು ಬಾರಿ ಗರ್ಭವನ್ನೂ ಧರಿಸಿದ್ದಳು. ಆದ್ರೆ ಎರಡೂ ಬಾರಿ ಅಬಾರ್ಷನ್ ಮಾಡಿಸಿದ್ದಾನೆ. ನಂತರ ಯುವತಿಯ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಕೊಂಡಂತೆ ನಟಿಸಿದ್ದಾನೆ ಎನ್ನಲಾಗಿದೆ. ಈಕೆಯ ಜೊತೆ ಮದುವೆಗೂ ಮುಂಚೆಯೇ ಗಣೇಶ್ ನವೆಂಬರ್ 6ಕ್ಕೆ ಬೇರೊಬ್ಬಳೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಯುವತಿಗೆ ತಿಳಿದು ಮದುವೆ ನಿಲ್ಲಿಸಿದ್ದಾಳೆ. ಇದಾದ ನಂತರ ಈಕೆಯನ್ನೇ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಗಣೇಶ್ ಇದೀಗ ಎಸ್ಕೇಪ್ ಆಗಿದ್ದು ಯುವತಿಯ ಮದುವೆ ಕನಸು ಭಗ್ನವಾಗಿದೆ.
ಇನ್ನೂ ಈತನ ಕಪಟತನ ಅರಿಯದ ಯುವತಿ ಸಂಪೂರ್ಣವಾಗಿ ರೆಡಿಯಾಗಿ ಪರಿವಾರದೊಂದಿಗೆ ಮಂಟಪಕ್ಕೆ ಬಂದಿದ್ದಾಳೆ. ಆದರೆ ಯುವಕ ಮಾತ್ರ ಬರದೇ ಇದ್ದ ಹಿನ್ನೆಲೆ ಆತಂಕದಿಂದ ಯುವತಿ ಮನೆಯವರು ಆತನ ಮನೆಗೆ ಹೋಗಿ ನೋಡಿದಾಗ ಆತ ಅಲ್ಲಿಂದ ಪರಾರಿಯಾಗಿರೋದು ಗೊತ್ತಾಗಿದೆ. ಹೀಗಾಗಿ ಯುವತಿ ಆತನ ಮನೆ ಮುಂದೆ ಧರಣಿ ಕುಳಿತಿದ್ದಾಳೆ.
Udupi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel