ರಾಜ್ಯದ ಪ್ರಥಮ ತೇಲುವ ಸೇತುವೆ ಮಲ್ಪೆ ಬೀಚ್ ನಲ್ಲಿ ಉದ್ಘಾಟನೆ…
ರಾಜ್ಯದ ಪ್ರಥಮ ತೇಲುವ ಸೇತುವೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಶುಕ್ರವಾರ ಉದ್ಘಾಟನೆ ಮಾಡಲಾಗಿದೆ. ಇನ್ಮುಂದೆ ಪ್ರವಾಸಿಗರಿಗೆ ಹೊಸ ಅನುಭವವನ್ನ ನೀಡಲಿದೆ.
ತೇಲುವ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್ “ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಿಸಿರುವುದು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ” ಎಂದು ಹೇಳಿದರು. ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದು.
#WATCH | Udupi MLA K Raghupathi Bhat inaugurated Karnataka’s first floating bridge at Malpe beach yesterday
He said, "We've told bridge's managers to appoint at least 20-25 lifeguards & ensure that everybody who goes there wears life jackets. It'll boost tourism at the beach." pic.twitter.com/CRHGPh0pUe
— ANI (@ANI) May 7, 2022
ಸಮುದ್ರದ ಅಲೆಗಳ ಇಳಿತಕ್ಕೆ ಹೊಂದಿಕೊಂಡು ಮೋಜು-ಮಸ್ತಿ ಮಾಡುವುದು ಪ್ರವಾಸಿಗರಿಗೆ ಒಂದು ಅಪೂರ್ವ ಅನುಭವ ಆಗಲಿದೆ. ಇದರಲ್ಲಿ 10 ಮಂದಿ ಲೈಫ್ ಗಾರ್ಡ್, 30 ಲೈಫ್ ಬ್ಯಾಗ್ಸ್, ಹೊಂದಿದ್ದು, ಪ್ರವಾಸಿಗರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿಕೊಂಡು ಸೇತುವೆಯ ಮೇಲೆ ನಡೆಯಬಹುದು. ಇದನ್ನು ಹೈ ಡೆನ್ಸಿಟಿ ಪಾಲಿಎತಿಲೀನ್ (HDPI) ಬ್ಲಾಕ್‍ಗಳಿಂದ ಮಾಡಲ್ಪಟ್ಟಿದ್ದು, ಅಲೆಯ ಏರಿಳಿತದಿಂದ ಭಯಬೀತರಾದವರು ರೈಲಿಂಗುಗಳ ಆಸರೆ ಪಡೆಯಬಹುದು. ಕೇರಳದ ಬೇಪೂರ್ ಬೀಚ್ ಹೊರತುಪಡಿಸಿದರೆ ಇಂತಹ ಸೌಲಭ್ಯ ಹೊಂದುವ ಕರ್ನಾಟಕದ ಮೊದಲ ಬೀಚ್ ಮಲ್ಪೆಯಾಗಿದೆ ಎಂದು ಬೀಚ್ ನಿರ್ವಹಣಾ ತಂಡದ ಸುದೇಶ್ ಶೆಟ್ಟಿ ಹೇಳಿದ್ದಾರೆ.