udupi ನಾಳೆ ಉಡುಪಿಯ ವ್ಯಾಕ್ಸಿನೇಶನ್ ಸೆಂಟರ್ ಶಿಫ್ಟ್
ಉಡುಪಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿದ್ದ ವ್ಯಾಕ್ಸಿನೇಶನ್ ಸೆಂಟರ್ ನಾಳೆ ಸೈಂಟ್ ಸಿಸಲೀಸ್ ಶಾಲೆಗೆ ಶಿಫ್ಟ್ ಆಗಲಿದೆ. ಈ ಕುರಿತು ಉಡುಪಿ ಸರ್ಜನ್ ಡಾ ಮಧುಸೂಧನ್ ನಾಯಕ್ ಮಾಹಿತಿ ನೀಡಿದ್ದಾರೆ.
ಸುಲಲಿತ ವ್ಯವಸ್ಥೆ ಉದ್ದೇಶದಿಂದ ವ್ಯಾಕ್ಸಿನೇಶನ್ ಸೆಂಟರ್ ಅನ್ನು ಸೈಂಟ್ ಸಿಸಲೀಸ್ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.
ವ್ಯಾಕ್ಸಿನ್ ಪಡೆದುಕೊಳ್ಳಲು ನಾಳೆ ಉಡುಪಿ ಜಿಲ್ಲಾಸ್ಪತ್ರೆಗೆ ಯಾರು ಬರಬೇಡಿ. ವ್ಯಾಕ್ಸಿನ್ ಸೆಂಟರನ್ನು ಸೈಟ್ ಸಿಸಿಲೀಸ್ ಶಾಲೆಗೆ ಶಿಫ್ಟ್ ಮಾಡಲಾಗಿದೆ.
ಬೆಳಗ್ಗೆ 8:30 ಟೋಕನ್ ಕೊಡಲು ಶುರು ಮಾಡುತ್ತೇವೆ. ಬೆಳಗ್ಗೆ 9.30 ಕ್ಕೆ ಎಂದಿನಂತೆ ವ್ಯಾಕ್ಸಿನೇಶನ್ ಆರಂಭವಾಗುತ್ತದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಯಿಂದ ಸಾರ್ವಜನಿಕರು ಅಂತರ ಕಾಪಾಡುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.