ಉಘಿಯರ್ ಮುಸ್ಲಿಮರ ಹಕ್ಕು ರಕ್ಷಣೆಗಾಗಿ ಚೀನಾಗೆ ಕರೆ ಕೊಟ್ಟ 43 ದೇಶಗಳು
ಚೀನಾದಲ್ಲಿ ಉಘಿಯರ್ ಮುಸ್ಲಿಮ್ ಸಮುದಾಯದವರ ಮೇಲೆ ಸಾಕಷ್ಟು ದೌರ್ಜನ್ಯ ನಡೆಸಲಾಗ್ತಿದೆ ಎಂಬ ಆರೋಪಗಳಿವೆ. ಆದ್ರೆ ಚೀನಾ ಇಂತಹ ಆರೋಪಗಳನ್ನ ತಳ್ಳಿಹಾಕುತ್ತಕಲೇ ಬಂದಿದೆ. ಇದೀಗ ಚೀನಾದ ಕ್ಸಿನ್ ಜಿಯಾಂಗ್ ನಲ್ಲಿರುವ ಉಘಘಿಯರ್ ಮುಸ್ಲಿಮ್ ಸಮುದಾಯದವರ ಹಕ್ಕುಗಳನ್ನ ರಕ್ಷಿಸಬೇಕೆಂದ ಚೀನಾಗೆ 43 ದೇಶಗಳು ಕರೆಕೊಟ್ಟಿವೆ. ವಿಶ್ವಸಂಸ್ಥೆ ಹಾಗೂ ವಿವಿಧ ಯೂರೋಪಿಯನ್ ಮತ್ತು ಏಷ್ಯಾದ ಸದಸ್ಯ ರಾಷ್ಟ್ರಗಳು ಸಹಿ ಮಾಡಿದ್ದು, ಈ ಕುರಿತ ಜಂಟಿ ಹೇಳಿಕೆಯನ್ನು ವಿಶ್ವಸಂಸ್ಥೆಯು ಬಿಡುಗಡೆ ಮಾಡಿದೆ. ಆದ್ರೆ ಚೀನಾ ಈ ಬಗ್ಗೆ ತೀವ್ರ ಆಕ್ರೋಶವನ್ನ ಹೊರಹಾಕಿದೆ.
ಉಯಿಘರ್ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಚೀನಾ ಮಾನವ ಹಕ್ಕುಗಳನ್ನ ಉಲ್ಲಂಘಿಸುತ್ತಿದೆ. ಆ ಸಮುದಾಯದವರಿಗೆ ಕಿರುಕುಳ ನೀಡ್ತಿದ್ದು, ಅವರಿಗೆ ಒತ್ತಾಯಪೂರ್ವಕವಾಗಿ ಕ್ರಿಮಿನಾಶಕ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಹೈಕಮಿಷನರ್ ಒಳಗೊಂಡಂತೆ ಸ್ವತಂತ್ರ ವೀಕ್ಷಕರು ಕೂಡಲೇ ಕ್ಸಿನ್ ಜಿಯಾಂಗ್ ಪ್ರಾಂತ್ಯವನ್ನು ಪ್ರವೇಶಿಸಲು , ಅರ್ಥಪೂರ್ಣ ಮಾಹಿತಿ ಪಡೆಯಲು ಅವಕಾಶ ನೀಡಬೇಕು ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವರದಿಗಳ ಪ್ರಕಾರ ಉಯಿಘರ್ ಮುಸ್ಲಿಮರು ಇರುವ ಪ್ರದೇಶದಲ್ಲಿ ರಾಜಕೀಯ ಮರುಶಿಕ್ಷಣದ ಶಿಬಿರಗಳು ತಲೆ ಎತ್ತಿದ್ದು, ಅಲ್ಲಿನ ಜನರನ್ನ ಒತ್ತಾಯಪೂರ್ವಕವಾಗಿ ಹಿಡಿದಿಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೂ 10 ಕ್ಕೂ ಹೆಚ್ಚು ಜನರನ್ನು ಇಂಥಹ ಶಿಬಿರಗಳಲ್ಲಿ ಹಿಡಿದಿಡಲಾಗಿದೆ ಎಂದು ಹೇಳಲಾಗಿದೆ. ಆದ್ರೆ ಈ ಆರೋಪಗಳನ್ನೆಲ್ಲಾ ಚೀನಾ ನಿರಾಕರಿಸಿದೆ. ಅಲ್ಲದೇ ಈ ಹೇಳಿಕೆ ಸುಳ್ಳಿನಿಂದ ಕೂಡಿದ್ದು, ಚೀನಾಗೆ ಧಕ್ಕೆ ತರುವ ಉದ್ದೇಶದಿಂದ ಕೂಡಿದೆ ಎಂದು ವಿಶ್ವಸಂಸ್ಥೆಯ ಚೀನಾ ರಾಯಭಾರಿ ಝಾಂಗ್ ಜುನ್ ಪ್ರತಿಕ್ರಿಯೆ ನೀಡಿದ್ದಾರೆ.