ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ. ಅಸ್ತ್ರಜೆನಿಕಾ, ಆಕ್ಸ್‍ಫರ್ಡ್ ವಿವಿ ಜಂಟಿ ಸಹಯೋಗದೊಂದಿಗೆ ಪುಣೆಯ ಸೀರಮ್ ಇನ್ಸ್‍ಸ್ಟಿಟ್ಯೂಟ್‍ನಲ್ಲಿ ಲಸಿಕೆ ತಯಾರು ಮಾಡಲಾಗುತ್ತಿತ್ತು. ಕೋವಿಶೀಲ್ಡ್ ಲಸಿಕೆಯ 3ನೇ ಹಂತದ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಳಕೆಗೆ ಅನುಮತಿ ನೀಡಲಾಗಿದೆ.

ಕಳೆದ ಸೋಮವಾರವೇ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಅಸ್ತ್ರಜೆನಿಕಾ-ಆಕ್ಸ್‍ಫರ್ಡ್ ವಿವಿ ಲಸಿಕೆ ಬಳಕೆ ಅನುಮತಿ ನೀಡಿರುವುದನ್ನು ಖುದ್ದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖಚಿತಪಡಿಸಿದ್ದು, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಷ್ಟು ಸಾಧ್ಯವೋ ಅಷ್ಟು ಬೇಗ ಕೊರೊನಾದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು. ಇದೊಂದು ಶುಭ ಸುದ್ದಿ ಎಂದು ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬ್ರಿಟನ್‍ನಲ್ಲಿ ಫೈಜರ್ ಲಸಿಕೆ ನೀಡಲಾಗುತ್ತಿದ್ದಯ, ಮುಂದಿನ ವಾರದೊಳಗೆ 60 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇಂದಿನಿಂದ ಅಸ್ತ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮೂರು ತಿಂಗಳಲ್ಲಿ 1 ಕೋಟಿ ಜನರಿಗೆ ಮೊದಲ ಡೋಸ್ ನೀಡುವ ಗುರಿಯನ್ನು ಇಂಗ್ಲೆಂಡ್ ಸರ್ಕಾರ ಹೊಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








