ಉಕ್ರೇನ್ ಬಿಕ್ಕಟ್ಟು – ನ್ಯಾಟೋ ಸೇರುವ ಹಠ ಬಿಟ್ಟ ಝೆಲೆನ್ಸ್ಕಿ – ಸೋಲು ಒಪ್ಪಿಕೊಳ್ಳುತ್ತ ಉಕ್ರೇನ್
ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 14 ನೇ ದಿನ. 14 ದಿನಗಳ ನಂತರವೂ, ಕೈವ್ ರಷ್ಯಾದ ಆಕ್ರಮಣದಿಂದ ಇನ್ನೂ ದೂರದಲ್ಲಿದೆ. ಈ ಮಧ್ಯೆ ರಷ್ಯಾ ಮೇಲಿನ ನಿರ್ಬಂಧಗಳು ಹೆಚ್ಚುತ್ತಲೇ ಇವೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಅಮೆರಿಕ ಆಮದು ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದ ಪೆಪ್ಸಿಕೋ ರಷ್ಯಾದಲ್ಲಿ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಿದೆ.
ರಷ್ಯಾ ದೇಶದ ಕಚ್ಚಾ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದ ಅಮೆರಿಕದ ಈ ನಡೆಯನ್ನು ಚೀನಾ ಟೀಕಿಸಿದೆ. ಮತ್ತೊಂದೆಡೆ, ತೈಲ ಆಮದು ನಿಲ್ಲಿಸಿದರೆ, ಯುರೋಪಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ರಷ್ಯಾ ಈಗಾಗಲೇ ಹೇಳಿದೆ.
ರಷ್ಯಾ ಇತ್ತೀಚೆಗೆ ಯುರೋಪಿನ ಅತಿದೊಡ್ಡ ಜಪೋರಿಜಿಯಾ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿತ್ತು. ಇದೀಗ ಉಕ್ರೇನ್‌ನ ಇಂಧನ ಸಚಿವರು ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ರಷ್ಯಾದ ಸೈನಿಕರು ಪರಮಾಣು ಸ್ಥಾವರದ ನಾಲ್ವರು ಉದ್ಯೋಗಿಗಳನ್ನು ಒತ್ತೆಯಾಳಾಗಿಟ್ಟುಕೊಂಡು ಸ್ಥಾವರವನ್ನು ಹಾಳುಮಾಡಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Zelensky admits defeat? Abandoned insistence on joining NATO, Ukraine helpless in front of Russia








