ukraine vs russia war | 6 ಸಾವಿರಕ್ಕೂ ಹೆಚ್ಚು ರಷ್ಯನ್ ಯೋಧರ ಹತ್ಯೆ
ಉಕ್ರೇನ್ : ನಾವು ಈವರೆಗೂ 6 ಸಾವಿರಕ್ಕೂ ಹೆಚ್ಚು ರಷ್ಯನ್ ಯೋಧರನ್ನ ಕೊಂದಿದ್ದೇವೆ. ಕೊನೆಯ ಉಸಿರು ಇರುವವರೆಗೂ ರಷ್ಯಾಗೆ ಶರಣಾಗೋ ಮಾತೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ಇಂದಿಗೆ 7 ದಿನಗಳು ಕಳೆದಿವೆ. ಈ ಯುದ್ಧದಲ್ಲಿ ರಷ್ಯಾದ ಕ್ರೌರ್ಯಕ್ಕೆ ಉಕ್ರೇನ್ ತತ್ತರಿಸಿ ಹೋಗಿದೆ. ರಷ್ಯಾದ ಈ ನಡೆಗೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಕಡೆ ಉಸಿರು ಇರೋವರೆಗೂ ರಷ್ಯಾಗೆ ಶರಣಾಗೋ ಮಾತೆ ಎಂದಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಯುದ್ಧ ಆರಂಭವಾಗಿ ನಿನ್ನೆ ಆರು ದಿನಗಳು ಕಳೆದಿವೆ.
ಈ ಅವಧಿಯಲ್ಲಿ ಆರು ಸಾವಿರ ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಸುದ್ಧ ಸಂಸ್ಥೆಗಳು ವರದಿ ಮಾಡಿವೆ.
ಇತ್ತ ರಷ್ಯಾ ಕೂಡ ಉಕ್ರೇನ್ ದೇಶವನ್ನು ಸುತ್ತುವರಿದಿದೆ ಎಂದು ಉಕ್ರೇನ್ ಗವರ್ನರ್ ಖೇರ್ ಸನ್ ಮಾಹಿತಿ ನೀಡಿದ್ದಾರೆ. ukrain-vs-russia-war-Assassination of 6000 Russian soldiers