ಉಕ್ರೇನ್ ಬಿಕ್ಕಟ್ಟು – ಸೆವೆರೊಡೊನೆಟ್ಸ್ಕ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನ ಸಾವು
ರಷ್ಯಾ-ಉಕ್ರೇನ್ ಯುದ್ಧ – ಉಕ್ರೇನ್ ಮೇಲೇ ರಷ್ಯಾದ ಆಕ್ರಮಣ 14 ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೈವ್ ಸೇರಿದಂತೆ ದೇಶದ ಪೂರ್ವ ಮತ್ತು ಮಧ್ಯ ಪ್ರದೇಶಗಳಲ್ಲಿನ ನಗರಗಳ ಮೇಲೆ ರಷ್ಯಾದ ವಿಮಾನಗಳು ರಾತ್ರೋರಾತ್ರಿ ಬಾಂಬ್ ದಾಳಿ ನಡೆಸಿವೆ.
ಇಲ್ಲಿಯವರೆಗೆ ಎರಡು ಮಿಲಿಯನ್ ನಾಗರಿಕರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಮಾನವೀಯ ಕಾರಿಡಾರ್‌ಗಳ ವಿಸ್ತರಣೆಗೆ ಕರೆ ನೀಡಿದರು.
ಮತ್ತೊಂದೆಡೆ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಪ್ರತೀಕಾರವಾಗಿ ಅಮೆರಿಕಾ ರಷ್ಯಾದ ತೈಲ ಆಮದುಗಳ ಮೇಲೆ ನಿಷೇಧವನ್ನು ಘೋಷಿಸಿದೆ..
ಪೂರ್ವ ಉಕ್ರೇನ್‌ನ ಸೆವೆರೊಡೊನೆಟ್ಸ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ರಾತ್ರಿ ಸುಮಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 22 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.
ರಷ್ಯಾ ದೇಶದ ವಿರುದ್ಧ ಹಲವು ರಾಷ್ಟ್ರಗಳು ಹೇರುತ್ತಿರುವ ವಾಣಿಜ್ಯ ವ್ಯಾಪಾರ ನಿರ್ಬಂಧ ಮುಂದುವರಿಯುತ್ತಿದೆ. ರಷ್ಯಾಕ್ಕೆ ವಾಯುಯಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ರಫ್ತಿನ ಮೇಲೆ ಬ್ರಿಟನ್ ನಿಷೇಧ ಹೇರಿದೆ.
10 people have died in a shooting in Severodonestk in eastern Ukraine.








