ಉಕ್ರೇನ್ ಬಿಕ್ಕಟ್ಟು – ಬುಕಾರೆಸ್ಟ್‌ನಿಂದ ಹೊರಡಿದ ಭಾರತೀಯರನ್ನ ಹೊತ್ತ 4 ನೇ ವಿಮಾನ
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 198 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಭಾರತಕ್ಕೆ ತೆರಳಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಿದ ನಂತರ, ಭಾರತವು ಉಕ್ರೇನ್‌ನಿಂದ ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕಿಯಾದಿಂದ ಉಕ್ರೇನ್ ಭೂ ಗಡಿ ದಾಟಿಕೊಂಡು ಭಾರತೀಯರನ್ನು ಸ್ಥಳಾಂತರಿಸಲು ಅನುವು ಮಾಡಿಕೊಡುತ್ತಿದೆ.
ಬುಕಾರೆಸ್ಟ್‌ನಿಂದ 219 ಭಾರತೀಯರನ್ನು ಹೊತ್ತ ಮೊದಲ ಸ್ಥಳಾಂತರಿಸುವ ವಿಮಾನವು ಶನಿವಾರ ಸಂಜೆ ಮುಂಬೈಗೆ ಬಂದಿಳಿದಿತ್ತು.
250 ಪ್ರಜೆಗಳೊಂದಿಗೆ ಎರಡನೇ ವಿಮಾನ ಭಾನುವಾರ ಮುಂಜಾನೆ ದೆಹಲಿಗೆ ಆಗಮಿಸಿದೆ. ಸುಮಾರು 240 ಭಾರತೀಯರೊಂದಿಗೆ ಮೂರನೇ ಏರ್ ಇಂಡಿಯಾ ವಿಮಾನ ಕೂಡ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ದೆಹಲಿಗೆ ಹೊರಟಿದೆ.
ಭಾರತವು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ. “ನಾಲ್ಕನೇ #OperationGanga ವಿಮಾನವು ಬುಕಾರೆಸ್ಟ್‌ನಿಂದ ಹೊರಟಿದೆ. 198 ಭಾರತೀಯ ಪ್ರಜೆಗಳು ದೆಹಲಿಗೆ ಹಿಂತಿರುಗುತ್ತಿದ್ದಾರೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಹಿಂದಿನ ಟ್ವೀಟ್‌ನಲ್ಲಿ ಅವರು “240 ಭಾರತೀಯ ಪ್ರಜೆಗಳೊಂದಿಗೆ # ಆಪರೇಷನ್ ಗಂಗಾ ಮೂರನೇ ವಿಮಾನವು ಬುಡಾಪೆಸ್ಟ್‌ನಿಂದ ದೆಹಲಿಗೆ ಹೊರಟಿದೆ.” ಎಂದು ಟ್ವೀಟ್ ಮಾಡಿದ್ದರು…