Ukraine Crisis : ಅಪಾಯಕಾರಿ ಹಂತ ತಲುಪಿದ ಉಕ್ರೇನ್ ರಷ್ಯಾ ಯುದ್ಧ…
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದೆ. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಒಂಬತ್ತು ನಗರಗಳ ಮೇಲೆ ರಷ್ಯಾ ಸೋಮವಾರ ತಡರಾತ್ರಿ 83 ಕ್ಷಿಪಣಿಗಳನ್ನ ಹಾರಿಸಿದೆ. ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 57 ಜನರು ಗಾಯಗೊಂಡಿದ್ದಾರೆ.
ಶನಿವಾರ ಉಕ್ರೇನ್, ರಷ್ಯಾದ ಕೆರ್ಚ್ ಸೇತುವೆಯನ್ನು ಸ್ಫೋಟಿಸಿತು. 48 ಗಂಟೆಗಳ ನಂತರ ರಷ್ಯಾ ಪ್ರತಿದಾಳಿ ನಡೆಸಿತು. ಸೋಮವಾರದ ದಾಳಿಯಲ್ಲಿ ಉಕ್ರೇನ್‌ನ ಪಾರ್ಕೋವಿ ಸೇತುವೆಯನ್ನ ಧ್ವಂಸಗೊಳಿಸಿದೆ. ಇದನ್ನು ನೈಪರ್ ನದಿಯಲ್ಲಿ ಪಾದಚಾರಿಗಳಿಗೆ ನಿರ್ಮಿಸಲಾಗಿದೆ.
ಉಕ್ರೇನ್ ಮೇಲಿನ ದಾಳಿಯ ನಂತರ ಪುಟಿನ್ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಸೋಮವಾರದ ದಾಳಿಯಲ್ಲಿ ನಾವು ಮಾರಕಾಸ್ತ್ರಗಳನ್ನು ಬಳಸಿದ್ದೇವೆ ಎಂದು ಹೇಳಿದರು. ರಷ್ಯಾದ ನಗರಗಳು ಮತ್ತು ವಿಶೇಷವಾಗಿ ಪರಮಾಣು ನೆಲೆಗಳನ್ನು ನಾಶಮಾಡುವ ಪಿತೂರಿ ಮಾಡಿದರೆ ಉಕ್ರೇನ್‌ನ ಮೂಲಸೌಕರ್ಯ ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಕ್ರಿಯಿಸಿ – ಮಾಸ್ಕೋ ಗೆ ನಾವು ತಲೆಬಾಗುತ್ತೇವೆ ಎಂದು ಭಾವಿಸಿದರೆ, ಅದು ಅದರ ತಪ್ಪುಗ್ರಹಿಕೆಯಾಗಿದೆ. ಉಕ್ರೇನ್ ಜನರು ತಲೆಬಾಗುವುದಿಲ್ಲ ಪ್ರತಿ ದಾಳಿಗೆ ಶೀಘ್ರವೇ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿರುಗೇಟು ಕೊಟ್ಟಿದ್ದಾರೆ.
Ukraine Crisis: The war between Ukraine and Russia has reached a dangerous level…