ಕೊಪ್ಪಳ : ರಷ್ಯಾ – ಉಕ್ರೇನ್ ಯುದ್ಧ ನಡೆಯುತ್ತಿದ್ದು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಸಿಲುಕಿದ್ದಾರೆ.. ಈ ನಡುವೆ ಕೇಂದ್ರ ಸರ್ಕಾರ ಆದಷ್ಟು ವಿದ್ಯಾರ್ಥಿಗಳನ್ನ ಸ್ವದೇಶಕ್ಕೆ ಕರೆತರುವವ ಪ್ರಯತ್ನದಲ್ಲಿದೆ.. ಈಗಾಗಲೇ ಒಂದಷ್ಟು ಜನ ತಾಯ್ನಾಡಿಗೆ ಮರಳಿದ್ದಾರೆ..
ಅಂತೆಯೇ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಯುವ ಸಂಗಮೇಶ ಸೊಪ್ಪಿಮಠ ಸ್ವಗ್ರಾಮಕ್ಕೆ ಮರಳಿದ್ದಾನೆ..ಮನೆಗೆ ಬರುತ್ತಿದ್ದ ಹಾಗೆ ಕುಟುಂಸ್ಥರು ನಿಟ್ಟುಸಿರು ಬಿಟ್ಟಿದ್ದು ಆರತಿ ಮಾಡಿ ಆತನನ್ನ ಸ್ವಾಗತಿಸಿದ್ದಾರೆ. ತಂದೆ-ತಾಯಿಗೆ ನಮಸ್ಕರಿಸಿ ಸಂಗಮೇಶ ಭಾವುಕರಾಗಿದ್ದಾರೆ.
ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಸಂಗಮೇಶ ಹಂಗೇರಿ ಮೂಲಕ ದೆಹಲಿಗೆ ಬಂದಿದ್ದಾರೆ. ದೆಹಲಿಯಿಂದ ಬೆಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಗಮೇಶನನ್ನು ಕುಟುಂಬಸ್ಥರು ಸ್ವಾಗತಿಸಿದ್ದಾರೆ.