ಹೆಚ್ಚಿನ ಇಂಟರ್ನೆಟ್ ಸೇವೆಗಾಗಿ ಎಲಾನ್ ಮಾಸ್ಕ್ ಜೊತೆ ಝೆಲೆನ್ಸ್ಕಿ ಮಾತುಕತೆ
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭಾನುವಾರದಂದು ಸ್ಪೇಸ್‌ಎಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಮುಂದಿನ ವಾರ ದೇಶವು ಹೆಚ್ಚಿನ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಟರ್ಮಿನಲ್‌ಗಳನ್ನು ಸ್ವೀಕರಿಸಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ ನನ್ನ “ಪದಗಳಿಂದ ಮತ್ತು ಕಾರ್ಯಗಳಿಂದ” ಬೆಂಬಲಿಸಿದ್ದಕ್ಕಾಗಿ ಮಸ್ಕ್ ಅವರಿಗೆ ಕೃತಜ್ಞರಾಗಿರುವುದಾಗಿ ಝೆಲೆನ್ಸ್ಕಿ ಹೇಳಿದರು. “ಮುಂದಿನ ವಾರ, ನಾಶವಾದ ನಗರಗಳಿಗಾಗಿ ನಾವು ಮತ್ತೊಂದು ಬ್ಯಾಚ್ ಸ್ಟಾರ್‌ಲಿಂಕ್ ಸಿಸ್ಟಮ್‌ಗಳನ್ನು ಸ್ವೀಕರಿಸುತ್ತೇವೆ. ಸಂಭವನೀಯ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ ನಾನು ಯುದ್ಧದ ನಂತರ ಈ ಬಗ್ಗೆ ಮಾತನಾಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಲಿಯನೇರ್ ವಾಣಿಜ್ಯೋದ್ಯಮಿ ಈ ಹಿಂದೆ ಫೆಬ್ರವರಿ 27 ರಂದು ಯುದ್ಧ ಪೀಡಿತ ಉಕ್ರೇನ್‌ಗೆ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ವಿತರಿಸಿದ್ದರು. “”ಸ್ಟಾರ್ ಲಿಂಕ್ ಸೇವೆಯು ಈಗ ಉಕ್ರೇನ್‌ನಲ್ಲಿ ಸಕ್ರಿಯವಾಗಿದೆ. ಮಾರ್ಗದಲ್ಲಿ ಇನ್ನಷ್ಟು ಟರ್ಮಿನಲ್‌ಗಳು” ಬರಲಿವೆ ಎಂದು ಟ್ವೀಟ್ ಮಾಡಿದ್ದರು
ಸ್ಟಾರ್‌ಲಿಂಕ್ ಪ್ರಸ್ತುತ 2,000 ಕ್ಕೂ ಹೆಚ್ಚು ಉಪಗ್ರಹಗಳ ಸಮೂಹವನ್ನು ನಿರ್ವಹಿಸುತ್ತದೆ, ಇದು ಭೂ ಗ್ರಹದ ಆದ್ಯಂತ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನ ಒದಗಿಸುವ ಗುರಿಯನ್ನು ಹೊಂದಿದೆ.