ಉಕ್ರೇನ್ – ರಷ್ಯಾ ಬಿಕ್ಕಟ್ಟು : ಯುದ್ಧದ 10 ದಿನದ ಪ್ರಮುಖ ಅಪ್ಡೇಟ್ ಇಲ್ಲಿದೆ…
- 66,200 ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಯುದ್ಧದಲ್ಲಿ ಹೋರಾಡಲು ವಿದೇಶದಿಂದ ಮರಳಿದ್ದಾರೆ ಎಂದು ಉಕ್ರೇನ್‌ನ ರಕ್ಷಣಾ ಸಚಿವರು ಹೇಳಿದ್ದಾರೆ.
- ರಷ್ಯಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರೋಫ್ಲಾಟ್ ಪ್ರಪಂಚದಾದ್ಯಂತ ತನ್ನ ಹಾರಾಟ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ. ಸುಮಾರು 39 ದೇಶಗಳು ರಷ್ಯಾದ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ನೀಡದಿರಲು ನಿರ್ಧರಿಸಿದ್ದವು. ಈ ಸಮಯದಲ್ಲಿ ಪುಟಿನ್ ಸರ್ಕಾರ ಈ ನಿರ್ಧಾರವನ್ನ ತಳೆದಿದೆ.
- ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಚೀನಾದ ನಾಗರಿಕರನ್ನು ರಷ್ಯಾದ ಸೇನೆ ಹೊರತೆಗೆದು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಿದೆ ಎಂದು ರಷ್ಯಾ ಚೀನಾಕ್ಕೆ ಭರವಸೆ ನೀಡಿದೆ.
- PayPal ರಷ್ಯಾದಲ್ಲಿ ತನ್ನ ಸೇವೆಗಳನ್ನು ನಿಲ್ಲಿಸಿದೆ.
- ಕೈವ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯ ಹೊರಗೆ ರಷ್ಯಾದ ರಾಕೆಟ್ ಬಿದ್ದಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಮತ್ತೊಮ್ಮೆ ಗುರಿ ತಪ್ಪಿತು ಎಂದಿದ್ದಾರೆ.
- ಉಕ್ರೇನ್‌ನ ಮರಿಯುಪೋಲ್‌ನಲ್ಲಿರುವ ವಸತಿ ಅಪಾರ್ಟ್ಮೆಂಟ್ ಮೇಲೆ ರಷ್ಯಾ ಶುಕ್ರವಾರ ಕ್ಷಿಪಣಿ ದಾಳಿ ನಡೆಸಿದೆ.
- ಉಕ್ರೇನ್ ಅನ್ನು ನೊ-ಫ್ಲೈ ವಲಯವನ್ನಾಗಿ ಮಾಡದಿದ್ದಕ್ಕಾಗಿ ನ್ಯಾಟೋವನ್ನು ಜೆಲೆನ್ಸ್ಕಿ ಟೀಕಿಸಿದ್ದಾರೆ. ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಝೆಲೆನ್ಸ್ಕಿಯ ಪ್ರಸ್ತಾಪವನ್ನು ನ್ಯಾಟೋ ತಿರಸ್ಕರಿಸಲಾಯಿತು.
- ಜಪೋರಿಝಿಯಾ ಪರಮಾಣು ಸ್ಥಾವರದ ಮೇಲಿನ ರಷ್ಯಾದ ದಾಳಿಯನ್ನು ಫ್ರಾನ್ಸ್ ಖಂಡಿಸಿದೆ. ವಿಶ್ವಸಂಸ್ಥೆಯ ಭದ್ರತೆಗಾಗಿ ವಿಶೇಷ ಅಧಿವೇಶನವನ್ನು ಕರೆಯುವಂತೆ ಫ್ರಾನ್ಸ್ ಅಧ್ಯಕ್ಷರ ಕಚೇರಿ ಹೇಳಿಕೆಯೊಂದನ್ನು ನೀಡಿದೆ.
- ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಖಾರ್ಕಿವ್, ಮರಿಯುಪೋಲ್ ಮುಂತಾದ ನಗರಗಳನ್ನು ರಷ್ಯಾ ಸೇನೆ ಸುತ್ತುವರಿದಿದೆ. ಇಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಇದರಿಂದ ನಾಗರಿಕರ ಸಂಕಷ್ಟ ಹೆಚ್ಚಾಗಿದೆ…