ಉಕ್ರೇನ್ ನ ಹಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ….
ಉಕ್ರೇನ್ ನಗರಗಳ ಮೇಲೆ ರಷ್ಯಾ ಇತ್ತಿಚೀಗೆ ಕ್ಷಿಪಣಿಗಳ ಮಳೆ ಗೆರೆದಿದೆ. ರಷ್ಯಾ ಇತ್ತೀಚೆಗೆ ಉಕ್ರೇನ್ ನ ಜಪೋರಿಜಿಯಾ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, 12 ಮಂದಿ ಮೃತಪಟ್ಟಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳು ನೆಲಸಮವಾಗಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಮೇಲೆ ರಷ್ಯಾ ಸುಮಾರು ಆರು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ಇತ್ತೀಚೆಗೆ ತನ್ನದೇ ಎಂದು ಘೋಷಿಸಿಕೊಂಡಿರುವ ನಾಲ್ಕು ಪ್ರದೇಶಗಳಲ್ಲಿ ಜಪೋರಿಜಿಯಾ ಪ್ರದೇಶವೂ ಒಂದಾಗಿದೆ. ಆದಾಗ್ಯೂ. ಜಪೋರಿಝಿಯಾ ಇನ್ನೂ ಉಕ್ರೇನ್‌ನ ಹಿಡಿತದಲ್ಲಿರುವುದರಿಂದ ಅದನ್ನು ವಶಪಡಿಸಿಕೊಳ್ಳಲು ರಷ್ಯಾ ತನ್ನ ಆಕ್ರಮಣವನ್ನು ಹೆಚ್ಚಿಸಿದೆ.
ಶನಿವಾರ ನಡೆದ ದಾಳಿಯಲ್ಲಿ ರಷ್ಯಾವನ್ನ ಕ್ರಿಮಿಯನ್ ಪರ್ಯಾಯ ದ್ವೀಪದೊಂದಿಗೆ ಸಂಪರ್ಕಿಸುವ ಕೆರ್ಚ್ ಸೇತುವೆ ಭಾಗಶಃ ನಾಶವಾಗಿದೆ. ಯುರೋಪ್‌ನಲ್ಲಿಯೇ ಅತಿ ದೊಡ್ಡ ಸೇತುವೆಯು ರಷ್ಯಾಕ್ಕೆ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ ಇದು ಉಕ್ರೇನ್ ನಡೆಸಿದ ದಾಳಿ ಎಂದು ರಷ್ಯಾ ಹೇಳಿದೆ. ಇದಕ್ಕೆ ಪರ್ಯಾಯವಾಗಿ ರಷ್ಯಾ ಇಂದು ಜಪೋರಿಜಿಯಾ ಮಳೆ ದಾಳಿ ನಡೆಸಿದೆ.
ದಾಳಿಯಲ್ಲಿ ಕನಿಷ್ಠ 20 ಮನೆಗಳು ಮತ್ತು 50 ಅಪಾರ್ಟ್‌ಮೆಂಟ್‌ಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ukraine russia war: Russia fired 75 missiles at many cities of Ukraine in 24 hours