Ukraine : ಲಿಂಗಾಯತರಿಗೆ ಒಬಿಸಿ ಸಿಕ್ಕಿದ್ದರೆ ಆತ ವಿದೇಶಕ್ಕೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ : ಶ್ರೀ ಜಯಮೃತ್ಯುಂಜಯ ಸ್ವಾಮೀಜಿ
ಹಾವೇರಿ : ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾದ ಕನ್ನಡಿಗ ಹಾವೇರಿ ಮೂಲದ ನವೀನ್ ಮನೆಗೆ ಪಂಚಮಸಾಲಿ ಪೀಠಾಧಿಪತಿಗಳಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ , ಯುದ್ಧದ ಸಂದರ್ಭದಲ್ಲಿ ನವೀನ್ ಕಳೆದುಕೊಂಡಿದ್ದು ದುಃಖ ತಂದಿದೆ. ಬೇರೆ ಸಮಾಜ ಒಪ್ಪಿದ್ದಾರೆ. ಅವರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರ ತಂದೆ ನೋವನ್ನ ತೋಡಿಕೊಂಡಿದ್ದಾರೆ.
ಲಿಂಗಾಯತರು ಅಂದ ತಕ್ಷಣ ಎಲ್ಲರೂ ಶ್ರೀಮಂತರು ಅಂದುಕೊಳ್ಳುತ್ತಾರೆ. ಲಿಂಗಾಯತರಿಗೆ ಒಬಿಸಿ ಸಿಕ್ಕಿದ್ದರೆ ಆತ ವಿದೇಶಕ್ಕೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ರಿಸರ್ವೇಷನ್ ಇಲ್ಲದ ಕಾರಣಕ್ಕೆ ಓರ್ವ ಪ್ರತಿಭಾವಂತನನ್ನ ನಾವು ಕಳೆದುಕೊಂಡಿದ್ದೇವೆ.
ಅದಕ್ಕೆ ನಾವು ಲಿಂಗಾಯತರ ಒಳಿತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈಗಲಾದರೂ ಸರ್ಕಾರ ಒಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಮೀಸಲಾತಿ ಕೊಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಯುತ್ತೆ.
ಲಿಂಗಾಯತರಲ್ಲಿ ಕೆಲವರು ಮಾತ್ರ ಶ್ರೀಮಂತರಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನವೀನ್ ಪಾರ್ಥಿವ ಶರೀರವನ್ನ ಆದಷ್ಟು ಬೇಗ ತರಲಿ. ನವೀನ್ ಅಣ್ಣ ಸಹ ಗೋಲ್ಡ್ ಮೇಡಲಿಸ್ಟ್ ಇದ್ದಾರೆ. ಅವರಿಗೆ ಅನುಕಂಪದ ಆಧಾರದ ಮೇಲೆ ಒಂದು ಕೆಲಸ ಕೊಡಬೇಕು. ಅವರ ತಂದೆಯೂ ಸಹ ನಮ್ಮ ಮೀಸಲಾತಿ ಹೋರಾಟಕ್ಕೆ ಸಾಥ್ ಕೊಡೋದಾಗಿ ಹೇಳಿದ್ದಾರೆ ಎಂದಿದ್ದಾರೆ..