Ukraine : ಉಕ್ರೆನ್ ಅಕ್ಕ ಪಕ್ಕದ ದೇಶದಲ್ಲಿ ನಮ್ಮ ದೇಶದ ವಿಮಾನಗಳು ಲ್ಯಾಂಡ್ ಆಗ್ತಾ ಇದಾವೆ..
ಧಾರವಾಡ : ಶಾಸಕ ಅರವಿಂದ ಬೆಲ್ಲದ ವಿವಾದಾತ್ಮಕ ಹೇಳಿಕೆ ನಿಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಚಿವ ಶಿವರಾಂ ಹೆಬ್ಬಾರ ನಿರಾಕರಿಸಿದ್ದಾರೆ.. ಧಾರವಾಡದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ಕೇಂದ್ರ ಸರಕಾರ ಆಪರೇಶನ್ ಗಂಗಾ ಎಂದು ಆರಂಭ ಮಾಡಿದೆ. 42 ವಿಮಾನಗಳನ್ನ ಕರೆತರಲು ವ್ಯವಸ್ಥೆ ಮಾಡಿದೆ. ಉಕ್ರೆನ್ ಅಕ್ಕ ಪಕ್ಕದ ದೇಶದಲ್ಲಿ ನಮ್ಮ ದೇಶದ ವಿಮಾನಗಳು ಲ್ಯಾಂಡ್ ಆಗ್ತಾ ಇದಾವೆ..
ಮಕ್ಕಳು ಬಾರ್ಡರಗೆ ಬರಲೂ 12,00 ಕಿಮಿ ಬರಬೇಕಿದೆ. ನವೀನ್ ಸಾವಿನ ವಿಚಾರ ನಮಗೆ ದುಖ: ತಂದಿದೆ. ಬಿಜೆಪಿ ಸಚಿವರುಗಳು ನವೀನ್ ಮನೆಯವರ ಸಂಪರ್ಕದಲ್ಲಿದ್ದಾರೆ. ಅವರ ಮನೆಯವರಿಗೆ ದೈರ್ಯ ಹೇಳಿದ್ದೆನೆ. ಯುದ್ಧದ ಬೀತಿ ಜೋರಾಗಿದೆ, ಹೆಣಗಳು ಬಿದ್ದ ಜಾಗಕ್ಕೆ ಹೋಗಲೂ ಆಗ್ತಿಲ್ಲ.
ಜೋಶಿ ಅವರು ವಿದೇಶಾಂಗ ಸಚಿವಾಲಯದ ಜೊತೆ ಇದಾರೆ. ಮಗುವನ್ನ ಜೀವಂತ ತರಲು ಆಗಲಿಲ್ಲ. ಕಡೆ ಪಕ್ಷ ಮೃತ ದೇಹವನ್ನ ಮನೆಗೆ ತಂದು ಮನೆಯವರಿಗೆ ಮುಖ ತೋರಿಸಬೇಕಿದೆ ಎಂದಿದ್ದಾರೆ..
ಇದೇ ವೇಲೆ ಬೆಲ್ಲದ ಹೇಳಿಕೆ ಗಮನಕ್ಕೆ ಬಂದಿಲ್ಲ. ಯಾವುದೆ ರಾಜಕಿಯ ಪಕ್ಷದ ನಾಯಕರು ಎಚ್ಚರದಿಂದ ಮಾತನಾಡಬೇಕು. ಕಲಿಯಲೂ ಹೋಗಿದ್ದ ನವೀನ ಅವರನ್ನ ಕಳೆದುಕ್ಕೊಂಡಿದ್ದೆವೆ. ಬುದ್ಧಿವಂತ ಯುವಕನನ್ನ ಕಳೆದುಕ್ಕೊಂಡಿದ್ದೇವೆ. ಔಷಧಿ ತರಲೂ ಹೋಗಿ ಪ್ರಾಣವನ್ನ ಕಳೆದುಕ್ಕೊಂಡಿದ್ದಾನೆ ಎಂದಿದ್ದಾರೆ.








