Ukraine : ಮಗನನ್ನ ರಕ್ಷಿಸಿ , ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ ರಕ್ಷತ್ ತಂದೆ ಮನವಿ
ಬೆಳಗಾವಿ : ಉಕ್ರೇನ್ ನಲ್ಲಿ ರಷ್ಯಾ ದಾಳಿ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಭೀಭತ್ಸವಾಗಿದೆ.. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.. ಆದ್ರೆ ಭಾರತೀಯ ಮೂಲದ ವಿದ್ಯಾರ್ಥಿಗಳು ಅದ್ರಲ್ಲೂ ನಮ್ಮ ಕರ್ನಾಟಕದವರು ಉಕ್ರೇನ್ ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.. ಈ ನಡುವೆ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಉಕ್ರೇನ್ ನಲ್ಲಿ ಶೋಚನೀಯವಾಗಿದೆ ಎನ್ನಲಾಗ್ತಿದೆ.. ಮತ್ತೊಂದೆಡೆ ಈಗಾಗಲೇ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಹಾವೇರಿ ಮೂಲದದ ನವೀನ್ ರಷ್ಯಾ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.. ಇದರಿಂದಾಗಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಆತಂಕ ದುಪ್ಪಟ್ಟಾಗಿ..
ಉಕ್ರೇನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಚಂದನ್ ಜಿಂದಾಲ್ ಸಾವು
ಇದೀಗ ಬೆಳಗಾವಿಯ ಅಥಣಿಯಲ್ಲಿ , ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಕದ ವಿದ್ಯಾರ್ಥಿ ರಕ್ಷತ್ ಗಣಿ ಎಂಬಾತನ ತಂದೆ ಈ ಬಗ್ಗೆ ಮಾತನಾಡಿದ್ದು , ಹೂಗುಚ್ಛ ನೀಡಿ ಸ್ವಾಗತ ಮಾಡುವ ಬದಲು, ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರವಿ ಗಣಿ ಅವರು , ಉಕ್ರೇನ್ ನಲ್ಲಿ ಭಾರತೀಯರಿಗೆ ಸ್ಥಳೀಯರು ಸಹಕಾರ ನೀಡುತ್ತಿಲ್ಲ, ರಕ್ಷಣೆಗಾಗಿ ಭಾರತೀಯ ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಮಗನನ್ನು ರಕ್ಷಿಸುವಂತೆ ಭಾವುಕರಾಗಿ ರವಿ ಗಣಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ..