Ukraine : ದೇಶ ಬಿಟ್ಟು ಓಡಿ ಹೋಗಿಲ್ಲ , ಕೀವ್ ನಲ್ಲಿದ್ದೇನೆ : ಝೆಲೆನ್ಸಿ
ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದಾಗಿ ಅಲ್ಲಿನ ಸ್ಥಿತಿ ಭೀಭತ್ಸವಾಗಿದೆ.. ಅಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ.. ಬಾರತೀಯ ವಿದ್ಯಾರ್ಥಿಗಳು ಸಹ ಯುದ್ಧ ಪೀಡಿತ ದೇಶದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.. ಎಲ್ಲಿ ನೋಡಿದ್ರೂ ಬಾಂಬ್ ಸ್ಪೋಟ , ಕುಸಿದು ಬಿದ್ದು ಕಟ್್ಟಡಗಳ ಅವಶೇಷಗಳು ಹೀಗೆ ಅಲ್ಲಿನ ಚಿತ್ರಣ ಭಯಂಕರವಾಗಿದೆ.. ಸಾವಿರಾರು ಜನರ ಜೀವ ಹೋಗಿದೆ.. ಭಾರತದ ಇಬ್ಬರು ಅದ್ರಲ್ಲೂ ಆ ಪೈಕಿ ಒಬ್ಬ ಕರ್ನಾಟಕದ ಹಾವೇರಿ ಮೂಲದವರ ಜೀವ ಹೋಗಿದೆ.. ಮತ್ತೊಬ್ಬ ಭಾರತೀಯನಿಗೆ ಗುಂಡು ತಾಕಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಅಫ್ಗಾನಿಸ್ತಾನದ ಅಧ್ಯಕ್ಷರು ತಾಲಿಬಾನಿಗಳ ದಾಳಿ ವೇಳೆ ದೇಶ ಬಿಟ್ಟು ಓಡಿ ಹೋಗಿದ್ದ ರೀತಿಯಲ್ಲೇ , ಉಕ್ರೇನ್ ಅಧ್ಯಕ್ಷರೂ ಸಹ ಫಲಾಯನ ಮಾಡುತ್ತಾರೆ ಎಂದೇ ಅಂದುಕೊಂಡಿದ್ದರು.. ಆದ್ರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ತಮ್ಮ ದೇಶಕ್ಕಾಗಿ ಖುದ್ದು ರಣಾಂಗಣಕ್ಕೆ ಇಳಿದಿರುವವರು..
ಜೀವ ಹೋಗೋ ತನಕ ದೇಶಕ್ಕಾಗಿ ಹೋರಾಡ್ತಿನಿ ಎಂದಿರುವ ಅವರು ನಿಜಕ್ಕೂ ಮಾದರಿ ನಾಯಕರಾಗಿದ್ದಾರೆ.. ಆದ್ರೂ ಕೆಲ ವದಂತಿಗಳು ಹರಿದಾಡುತ್ತಿವೆ.. ಝೆಲೆನ್ಸಿ ಪೋಲೆಂಡ್‍ಗೆ ಫಲಾಯನ ಮಾಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.. ಆದ್ರೆ ವಿಡಿಯೋ ಮೂಲಕ ಇದಕ್ಕೆಲ್ಲಾ ಝೆಲೆನ್ಸಿ ದಿಟ್ಟ ಉತ್ತರ ನೀಡಿದ್ದಾರೆ..
ಇನ್‍ಸ್ಟಾಗ್ರಾಮ್‍ನಲ್ಲಿ ಝೆಲೆನ್ಸ್ಕಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಝೆಲೆನ್ಸ್ಕಿ ತಮ್ಮ ಕಚೇರಿಯಲ್ಲಿಯೇ ಇರುವುದು ಹಾಗೂ ಅವರ ಜೊತೆಗೆ ಮತ್ತೊಬ್ಬ ಅಧಿಕಾರಿ ಕೂಡ ಇರುವುದು ಕಂಡು ಬಂದಿದೆ. ನಾನು ಕೀವ್ ನಲ್ಲಿದ್ದೇನೆ. ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಹೊರತಾಗಿ ತಪ್ಪಿಸಿಕೊಂಡು ಹೋಗಿಲ್ಲ ಎಂದಿದ್ದಾರೆ..