ಉಕ್ರೇನಿಯನ್ ಸೈನಿಕರು ನಮ್ಮನ್ನ ಕೆಟ್ಟದಾಗಿ ನಡೆಸಿಕೊಂಡರು – ವಿದ್ಯಾರ್ಥಿ ಹೇಳಿಕೆ
ಉಕ್ರೇನ್ನಿಂದ ಹಿಂತಿರುಗಿರುವ ಭಾರತೀಯ ವಿದ್ಯಾರ್ಥಿಗಳು ರೊಮೇನಿಯಾದೊಂದಿಗಿನ ಯುದ್ಧಪೀಡಿತ ದೇಶದ ಗಡಿಯಲ್ಲಿ ಪರಿಸ್ಥಿತಿ ಭಯಾನಕವಾಗಿದೆ ಎಂದು ತಿಳಿಸಿದ್ದಾರೆ. ಉಕ್ರೇನಿಯನ್ ಸೈನಿಕರು ಭಾರತೀಯರನ್ನು ಥಳಿಸಿದ್ದಾರೆ ಮತ್ತು ಅಶ್ರುವಾಯು ಶೆಲ್ಗಳನ್ನು ಹಾರಿಸಿದ್ದಾರೆ.
ರಷ್ಯಾದ ತೀವ್ರವಾದ ಸೇನಾ ದಾಳಿಯ ನಡುವೆ ಯುದ್ಧ ಪೀಡಿತ ಪ್ರದೇಶದಿಂದ ಭಾರತಕ್ಕೆ ಆಗಮಿಸಿದ ಎಂಟು ವಿದ್ಯಾರ್ಥಿಗಳು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಯಾವುದೇ ಬೆಂಬಲವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಉಕ್ರೇನ್ನ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ ಟೀನಾ ಕುಮಾರಿ ಮಾತನಾಡಿ, ಗಡಿಯಲ್ಲಿ ಉಕ್ರೇನ್ ಸೈನಿಕರು ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಹುಡುಗರನ್ನು ಹೊಡೆಯುತ್ತಿದ್ದರು, ಅಶ್ರುವಾಯು ಶೆಲ್ಗಳನ್ನು ಮತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದರು. ಎಂದು ತಿಳಿಸಿದ್ದಾಳೆ.
ರಾಜಸ್ಥಾನದ ಕೈಗಾರಿಕೆ ಸಚಿವೆ ಶಕುಂತ್ಲಾ ರಾವತ್, ಸಿಕರ್ನ ಬಿಜೆಪಿ ಸಂಸದ ಸ್ವಾಮಿ ಸುಮೇಧಾನಂದ್ ಮತ್ತು ಇತರರು ಜೈಪುರ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು, ಅವರು ವಿಮಾನಯಾನಕ್ಕಾಗಿ ಕೇಂದ್ರಕ್ಕೆ, ಅವರಿಗೆ ಅನುಕೂಲ ಮಾಡಿಕೊಟ್ಟ ರೊಮೇನಿಯಾ ಸರ್ಕಾರಕ್ಕೆ ಮತ್ತು ಅವರನ್ನು ಕಳುಹಿಸಲು ವ್ಯವಸ್ಥೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.