ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಉಮಾಪತಿ ಭೇಟಿ
ಬೆಂಗಳೂರು : ನಟ ದರ್ಶನ್ ಗೆ ವಂಚನೆ ಕೇಸ್ ನ ಬಿಸಿ ಕಡಿಮೆಯಾಗುತ್ತಿದ್ದಂತೆ ನಿರ್ಮಾಪಕ ಉಮಾಪತಿ ದೇವರ ಮೊರೆ ಹೋಗಿದ್ದಾರೆ.
ಕುಟುಂಬದ ಸಮೇತರಾಗಿ ನಿರ್ಮಾಪಕ ಉಮಾಪತಿ ಅವರು, ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರು ಈ ಪ್ರಕರಣಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದು ಇಲ್ಲಿಗೆ ನಿಂತಿದೆ ಎಂದರು.
ಇದೇ ವೇಳೆ ಉಮಾಪತಿ ಅವರು ನನ್ನನ್ನು ಬಳಸಿಕೊಂಡರು ಎಂಬ ಆರೋಪಿ ಅರುಣಾ ಕುಮಾರಿ ಅವರು ಆರೋಪದ ಬಗ್ಗೆ ಮಾತನಾಡಿ, ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ.
ಅವರು ಯಾರು..? ಅವರ ಬಗ್ಗೆ ಮಾತಾಡಿ ಅವರನ್ಯಾಕೆ ದೊಡ್ಡವರನ್ನಾಗಿ ಮಾಡಲಿ..? ನಾನು ಕಾನೂನಯಡಿಯಲ್ಲಿ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ಹೇಳಿದರು.
ಇನ್ನೋಂದೆಡೆ ಪ್ರಕರಣದ ಆರೋಪಿ ಅರುಣಾ ಕುಮಾರಿ ಅವರು ಇಂದು 2 ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಲಿದ್ದು, ಭಾರಿ ಕುತೂಹಲ ಕೆರಳಿಸಿದೆ.










